



ಮಂಗಳೂರು : ದ.ಕ. ಜಿಲ್ಲೆಯಲ್ಲಿ ಜೂನ್ 1ರಿಂದ ಖಾಸಗಿ ಮತ್ತು ಸಿಟಿ ಬಸ್ಗಳು ಸಂಚರಿಸಲಿದ್ದು, ಮೊದಲನೇ ಹಂತದಲ್ಲಿ ಶೇ.50ರಷ್ಟು ಬಸ್ಗಳನ್ನು ರಸ್ತೆಗಿಳಿಸಲು ಮಾಲಕರ ಸಂಘ ನಿರ್ಧರಿಸಿದೆ.
ಸಾಮಾನ್ಯ ದಿನಗಳಲ್ಲಿ ಮಂಗಳೂರಿಂದ ಬೆಳಗ್ಗೆ 6 ಗಂಟೆಯಿಂದ ರಾತ್ರಿ ಸುಮಾರು 10ರವರೆಗೆ 325ಕ್ಕೂ ಅಧಿಕ ಸಿಟಿ ಬಸ್ಗಳು ವಿವಿಧ ಪ್ರದೇಶಗಳಿಗೆ ತೆರಳುತ್ತಿದ್ದು, ಇದರಲ್ಲಿ ಸುಮಾರು 150 ಬಸ್ಗಳನ್ನು ಜೂನ್ 1 ರಿಂದ ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಬುಧವಾರ ಬಸ್ ಮಾಲಕರ ಸಭೆ ನಡೆಯಲಿದ್ದು, ಇಲ್ಲಿ ಅಂತಿಮ ನಿರ್ಧಾರ ಹೊರ ಬೀಳಲಿದೆ. ಅದೇ ರೀತಿ ಸುಮಾರು 450 ರಷ್ಟು ಸರ್ವಿಸ್ ಬಸ್ಗಳು, ಸುಮಾರು 70 ರಷ್ಟು ಒಪ್ಪಂದದ ಮೇರೆಗಿನ ಸಾರಿಗೆ (ಕಾಂಟ್ರಾಕ್ಟ್ ಕ್ಯಾರೇಜ್) ಮತ್ತು 150ಕ್ಕೂ ಮಿಕ್ಕಿ ಟೂರಿಸ್ಟ್ ಬಸ್ಗಳು ಸಂಚರಿಸುತ್ತದೆ.ಜೂನ್ 1ರಿಂದ ಶೇ.50ರಷ್ಟು ಸಿಟಿ ಬಸ್ಗಳು ರಸ್ತೆಗಿಳಿಯಲಿವೆ.





