



ವಿಟ್ಲ: ವಿಟ್ಲ ಪೊಲೀಸ್ ಠಾಣೆ 48 ಗಂಟೆಗಳ ಕಾಲ ಸೀಲ್ಡೌನ್ ಆಗಿರುವ ಹಿನ್ನೆಲೆಯಲ್ಲಿ ಸೋಮವಾರ ವಿಟ್ಲ ವರ್ತಕರ ಸಂಘ ಹಾಗೂ ವಿಟ್ಲ ನಾಗರೀಕರ ಸಭೆ ವಿಟ್ಲ ಅತಿಥಿ ಗೃಹದಲ್ಲಿ ಸಂಘದ ಅಧ್ಯಕ್ಷ ಬಾಬು ಕೆ. ವಿ. ನೇತೃತ್ವದಲ್ಲಿ ನಡೆಯಿತು.
ಸೋಂಕಿತ ವ್ಯಕ್ತಿ ಯಾರ ಸಂಪರ್ಕಕ್ಕೆಲ್ಲಾ ಬಂದಿದ್ದಾರೆಂಬ ಗೊಂದಲವಿರುವ ಕಾರಣ, ವಿಟ್ಲದ ಪ್ರತಿಯೊಬ್ಬ ಜನರ ಹಿತದೃಷ್ಠಿಯಿಂದ ಕೆಲಸ ಕಾರ್ಯಗಳು ನಡೆಯಬೇಕು. ವ್ಯಾಪಾರಿದ ಜತೆಗೆ ನಮ್ಮ ಸುರಕ್ಷತೆಯನ್ನು ನೋಡಿಕೊಳ್ಳುವ ಅನಿವಾರ್ಯತೆ ಇರುವುದರಿಂದ ಪ್ರತಿಯೊಬ್ಬರೂ ಅಂಗಡಿಯನ್ನು ಮುಚ್ಚಿ ಸ್ವಯಂ ಪ್ರೇರಿತವಾಗಿ ಲಾಕ್ಡೌನ್ ಮಾಡುವ ಅನಿವಾರ್ಯತೆ ಇದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕೆಲಸ ಮಾಡುವ ಬದಲಾಗಿ ಎಲ್ಲಾ ವರ್ತಕರು ಒಮ್ಮತದ ತೀರ್ಮಾನಕ್ಕೆ ಬರಬೇಕು ಎಂಬ ಆಗ್ರಹ ಸಭೆಯಲ್ಲಿ ಪ್ರತಿಯೊಬ್ಬರಿಂದ ಕೇಳಿ ಬಂತು.
ಮೇ.26ರಿಂದ ಮೇ.31ರ ವರೆಗೆ ಸ್ವಯಂ ಪ್ರೇರಣೆಯಿಂದ ಪ್ರತಿಯೊಂದು ಅಂಗಡಿಯವರೂ ಬೆಳಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಅಂಗಡಿಗಳನ್ನು ತೆರೆದು ಬಳಿಕ ಎಲ್ಲರೂ ಬಂದ್ ಮಾಡಿ ಸಹಕಾರ ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಯಿತು.






