ಮುಂಬಯಿ : ದೇಶದಲ್ಲಿ ಅತಿಹೆಚ್ಚು ಕರೋನ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗುತ್ತಿವೆ.

ಕರ್ತವ್ಯ ನಿರ್ವಹಿಸುತ್ತಿದ್ದ 1666 ಪೊಲೀಸರಿಗೆ ಕರೋನ ಸೋಂಕು ತಗುಲಿದ್ದು, ಅವರಲ್ಲಿ18 ಮಂದಿ ಪೊಲೀಸರು ಮೃತಪಟ್ಟಿದ್ದಾರೆ.

ಮುಂಬೈನ ವಿಲೇ ಪಾರ್ಲೆ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಅರುಣ್ ಫಡ್ತಾರೆ ವೈರಸ್ ನಿಂದ ಮೃತಪಟ್ಟಿದ್ದಾರೆ ಎಂದು ಮುಂಬೈ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಹೇಳಿದ್ದಾರೆ.

ಮೇ 21 ರಂದು ಎಎಸ್‌ಐ ಭಿವ್ಸೆನ್ ಹರಿಭೌ ಅವರನ್ನು ಕಳೆದುಕೊಂಡಿದ್ದೇವೆ. ಅಲ್ಲದೇ ಪೊಲೀಸರಿಗೆ ಹೆಚ್ಚು ಸೋಂಕು ತಗುಲುತ್ತಿರುವುದಕ್ಕೆ ರಾಜ್ಯ ಡಿಜಿಪಿ ಶೋಕ ವ್ಯಕ್ತಪಡಿಸುತ್ತಿದ್ದರು. ಮೃತರ ಕುಟುಂಬ ಸದಸ್ಯರಿಗೆ ಅವರು ತೀವ್ರ ಸಹಾನುಭೂತಿ ವ್ಯಕ್ತಪಡಿಸಿದರು.

ವಯಸ್ಸಾದವರು ಕರ್ತವ್ಯಕ್ಕೆ ಮರಳದಂತೆ ಪೊಲೀಸರು ಆದೇಶ ಹೊರಡಿಸಿದ್ದಾರೆ ಎಂದು ಈಗ ವರದಿಯಾಗಿದೆ. ಆದರೆ, ಮಹಾರಾಷ್ಟ್ರದಲ್ಲಿ ಪೊಲೀಸರ ಸಾವಿನ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಪ್ರಸ್ತುತ ಅಗತ್ಯಗಳನ್ನು ಪೂರೈಸಲು ಸಶಸ್ತ್ರ ಪಡೆಗಳಿಂದ ಸುಮಾರು 2000 ಹೆಚ್ಚುವರಿ ಪೊಲೀಸರನ್ನು ಕಳುಹಿಸುವಂತೆ ಮಹಾರಾಷ್ಟ್ರ ಸರ್ಕಾರ ಕೇಂದ್ರವನ್ನು ಕೇಳಿದೆ.

ಭಾರತದ ಮಹಾರಾಷ್ಟ್ರದಲ್ಲಿ ಕರೋನಾ ಪ್ರಕರಣಗಳು ಹೆಚ್ಚು. ದೇಶದಲ್ಲಿ 44,582 ಕರೋನಾ ಪಾಸಿಟಿವ್ ಪ್ರಕರಣಗಳಿವೆ. ಮಾರಣಾಂತಿಕ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 1517 ಕ್ಕೆ ಏರಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here