



ಬಂಟ್ವಾಳ: ಇಂದು ರಾಜ್ಯದಲ್ಲಿ ಒಟ್ಟು 216 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1959ಕ್ಕೆ ಏರಿಕೆಯಾಗಿದೆ.
ಬೆಳಗ್ಗಿನ ಹೆಲ್ತ್ ಬುಲೆಟಿನ್ ನಲ್ಲಿಯೇ 196 ಕೇಸ್ ಪತ್ತೆಯಾಗಿದ್ದು, ಮದ್ಯಾಹ್ನ ಮತ್ತೆ 20 ಹೊಸ ಪ್ರಕರಣ ಪತ್ತೆಯಾಗಿದೆ.
ಯಾದಗಿರಿ 72, ರಾಯಚೂರು 40, ಚಿಕ್ಕಬಳ್ಳಾಪುರ 26,
ಮಂಡ್ಯ 28, ಗದಗ 15, ಧಾರವಾಡ 5, ಬೆಂಗಳೂರು, ಹಾಸನ ತಲಾ 4, ಉ.ಕ., ಕೋಲಾರ, ಬಳ್ಳಾರಿ, ಬೀದರ್ ತಲಾ 3, ದ.ಕ. ತಲಾ 2, ಧಾರವಾಡ, ಬೆಳಗಾವಿ, ಕಲಬುರ್ಗಿ ತಲಾ 1ಕೇಸ್ ಪತ್ತೆಯಾಗಿದೆ.
ದ.ಕ ಜಿಲ್ಲೆಯ ಎರಡು ಕೊರೋನಾ ಪ್ರಕರಣ ಪತ್ತೆಯ ವಿವರ: ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಮಹಿಳೆಗೆ ಸೋಂಕು. ಉಸಿರಾಟದ ತೊಂದರೆ ಹಿನ್ನೆಲೆ ಪರೀಕ್ಷೆ ಮಾಡಿದಾಗ ಸೋಂಕು ಪತ್ತೆ. ಇನ್ನೊಂದು ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ನಲ್ಲಿದ್ದ ಗಂಡಸಿಗೆ ಸೋಂಕು ರಾಜ್ಯದಲ್ಲಿ ಒಟ್ಟು 43 ಮಂದಿ ಕೊರೊನ ಸೋಂಕಿಗೆ ಬಲಿಯಾಗಿದ್ದಾರೆ.






