ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಮಂದಿ ಡಿಸ್ಚಾರ್ಜ್.
ಮಂಗಳೂರಿನ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೋವಿಡ್ ರೋಗಿಗಳು.
4 ಮಂದಿ ಬಂಟ್ವಾಳ,1 ಬೊಳೂರು ನಿವಾಸಿಗಳು. ಈ ಮೂಲಕ ಕೊರೊನಾ ಮುಕ್ತವಾದ ಬಂಟ್ವಾಳ. ಅತೀ ದೊಡ್ಡ ಕೊರೊನಾ ಹಾಟ್ ಸ್ಪಾಟ್ ಆಗಿದ್ದ ಬಂಟ್ವಾಳ. ಡಿಸ್ಚಾರ್ಜ್ ಆದ ರೋಗಿಗಳನ್ನು ಬೀಳ್ಕೊಟ್ಟ ದಕ್ಷಿಣ ಕನ್ನಡ ಜಿಲ್ಲಾಡಳಿತ

ಬಂಟ್ವಾಳ: ಕೊರೊನಾ ಸೊಂಕು ಪಾಸಿಟಿವ್ ಪ್ರಕರಣದಿಂದ ಭಾರೀ ಸುದ್ದಿಯಾಗಿದ್ದ ಬಂಟ್ವಾಳಕ್ಕೆ ಇಂದು ಅತ್ಯಂತ ಸಂತಸದ ದಿನ.
ಕೊರೊನಾ ಪಾಸಿಟಿವ್ ಸೊಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ವಾಪಸ್ಸಾಗಿದ್ದಾರೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಬಂಟ್ವಾಳ ತಾಲೂಕಿನಲ್ಲಿ ಒಟ್ಟು 12 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿತ್ತು. ಅದರಲ್ಲಿ ಮೂರು ಮಹಿಳೆಯರು ಕೊರೊನಾದಿಂದ ಮೃತಪಟ್ಟಿದ್ದರು.

ಜಿಲ್ಲೆಯಲ್ಲಿ ಪ್ರಥಮವಾಗಿ ಕೊರೊನಾ ಪಾಸಿಟಿವ್ ಕೇಸು ಪತ್ತೆಯಾಗಿದ್ದು ಬಂಟ್ವಾಳದಲ್ಲಿ.
ಸಜೀಪನಡು ಗ್ರಾಮದ 9 ತಿಂಗಳ ಮಗುವಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆ ಬಳಿಕ ತುಂಬೆಯಲ್ಲಿ ಒಂದು ಪಾಸಿಟಿವ್ ಪತ್ತೆಯಾಗಿತ್ತು. ಆ ಬಳಿಕ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ಬಂಟ್ವಾಳ ಪೇಟೆಯ ಮಹಿಳೆಗೆ ಸೊಂಕು ತಗುಲಿ ಮಹಿಳೆ ಮೃತಗೊಂಡಿದ್ದರು. ಮೃತ ಮಹಿಳೆಯ ಅತ್ತೆ ಹಾಗೂ ನೆರೆಮನೆಯ ಮಹಿಳೆ ಕೊರೊನಾ ದಿಂದ ಮೃತರಾಗಿದ್ದರು. ಆ ಬಳಿಕ ಮೃತಪಟ್ಟ ಮೂವರು ಮಹಿಳೆಯರ ಸಂಪರ್ಕದಿಂದ 6 ಜನರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಬಾಲಕಿ ಸಹಿತ ಅವೆರಲ್ಲರೂ ಮಂಗಳೂರು ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಅಗಿದ್ದಾರೆ.
ಬಂಟ್ವಾಳದಲ್ಲಿ ಆರಂಭದಲ್ಲಿ ಮೃತಪಟ್ಟ ಮಹಿಳೆಯ ಮಗಳು 16 ವರ್ಷದ ಬಾಲಕಿ, ಆ ಬಳಿಕ ಮೃತಪಟ್ಟ ನೆರೆಮನೆಯ ಮಹಿಳೆಯ 33 ವರ್ಷದ ಮಗಳು, ಇವರ ಸಂಪರ್ಕ ದಿಂದ ನೆರೆಮನೆಯ ಸಂಬಂಧಿ 69 ವರ್ಷದ ವೃದ್ದ ಅವರ ಮನೆಯಲ್ಲಿದ ಸಂಬಂಧಿಕರಾದ 69 ಮಹಿಳೆ ಹಾಗೂ 72 ವರ್ಷದ ವೃದ್ಧೆ  ಮತ್ತು 30 ವರ್ಷದ ಯುವಕ ಇವರೆಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ವಾಪಸ್ಸಾಗಿದ್ದಾರೆ.

ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಪಾಣೆಮಂಗಳೂರು ಸಮೀಪದ ನಾಯಿಲ ನಿವಾಸಿ 56 ವರ್ಷದ ಮಹಿಳೆ ಅವರು ಕೂಡ ಗುಣಮುಖರಾಗಿದ್ದಾರೆ.
ಪ್ರಸ್ತುತ ಬಂಟ್ವಾಳದಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲ. ಸದ್ಯ ಬಂಟ್ವಾಳ ಕೊರೊನಾ ಮುಕ್ತವಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here