ಬಂಟ್ವಾಳ: ಕೊರೊನಾ ಸೊಂಕು ಪತ್ತೆಯಾದ ಹಿನ್ನಲೆಯಲ್ಲಿ ಸೀಲ್ ಡೌನ್ ಮಾಡಲಾಗಿದ್ದ ಬಂಟ್ವಾಳ ಪೇಟೆಯಲ್ಲಿನ ನಿವಾಸಿಯೋರ್ವರು ಹೊರಹೋಗಿದ್ದು ಇವರ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಪೇಟೆ ನಿವಾಸಿ ಅಮರನಾಥ ಬಾಳಿಗ ಅವರ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಇಂದು ಪ್ರಕರಣ ದಾಖಲಾಗಿದೆ.
ಶುಕ್ರವಾರ ಬೆಳಿಗ್ಗೆ ಅಮರನಾಥ ಬಾಳಿಗ ಅವರು ಸೀಲ್ ಡೌನ್ ನಿಯಂತ್ರಿತ ವಲಯದಿಂದ ಮೆಲ್ಕಾರ್ ಆರ್.ಟಿ.ಒ.ಕಚೇರಿಗೆ ಹೋಗಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಬಂಟ್ವಾಳ ಪೋಲೀಸರು ಆತನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಟ್ವಾಳ ಪೇಟೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಬಳಿಕ ಸೀಲ್ ಡೌನ್ ನಿಯಂತ್ರಿತ ವಲಯ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದ್ದರು.
ಪ್ರಾಣ ನಿರೋಧಕ ನಿರ್ಬಂಧ ದ ನಿಯಮವೆಂದು ತಿಳಿದು ಕೂಡ ಕೋವಿಡ್ 19 ಸೊಂಕು ಹರಡುವಿಕೆಯಲ್ಲಿ ಬೇರೆಯವರ ಪ್ರಾಣ ಕ್ಕೆ ಅಪಾಯವಾಗುವ ರೀತಿಯಲ್ಲಿ ನಿರ್ಲಕ್ಷ್ಯ ತನ ವಹಿಸಿ ಬಂಟ್ವಾಳ ಪೇಟೆಯಿಂದ ಹೊರಹೋಗಿರುವ ಅಮರನಾಥ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here