



ಬಂಟ್ವಾಳ: ಬಂಟ್ವಾಳ ಪೇಟೆ ಸೀಲ್ ಡೌನ್ ಆದ ಹಿನ್ನೆಲೆ ಆ ಪ್ರದೇಶದ ಜನರಿಗೆ ಮನೆಯಿಂದ ಬರಲು ಸಾಧ್ಯವಾಗದೆ ಇದ್ದ ಸಮಯದಲ್ಲಿ ಅಲ್ಲಿನ ಇಬ್ಬರು ಯುವಕರಿಗೆ ಆನ್ಲೈನ್ ಶಾಪಿಂಗ್ ನೆಟ್ವರ್ಕ್ ಪ್ರಾರಂಭ ಮಾಡುವ ಯೋಚನೆಯಾಯಿತು.
ಅದರಂತೆ ಇಬ್ಬರು ಸಾಫ್ಟ್ ವೇರ್ ಸ್ನೇಹಿತರು ಸೇರಿ ಆನ್ಲೈನ್ ಶಾಪಿಂಗ್ ನೆಟ್ವರ್ಕ್ smartbantwala.com ಪ್ರಾರಂಭಿಸಿದರು.
ಸಂದೀಪ್ ಬಂಟ್ವಾಳ ಮತ್ತು ಕೃಷ್ಣ ಕುಮಾರ್ ಸೋಮಯಾಜಿ ಎಂಬ ಸಾಫ್ಟ್ ವೇರ್ ಯುವಕರು ಲಾಕ್ ಡೌನ್ ಸಂದರ್ಭದಲ್ಲಿ ಬಂಟ್ವಾಳದ ಅಂಗಡಿಗಳಲ್ಲಿ ಪೇಟೆ ಮತ್ತು ಸುತ್ತ ಮುತ್ತಲಿನ ಜನರು ಒಟ್ಟು ಸೇರದೆ ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಪೇಟೆಗೆ ಬರದಂಥ ಸನ್ನಿವೇಶ ಇರುವ ಕಾರಣ ಈ ಇಬ್ಬರು ಯುವಕರು smartbantwala.com ಎಂಬ ಆನ್ಲೈನ್ ಶಾಪಿಂಗ್ ಮೂಲಕ ಅಲ್ಲಿನ ಜನರಿಗೆ ನೆರವಾಗುತ್ತಿದ್ದಾರೆ.
ಬಂಟ್ವಾಳ ಪರಿಸರದ ಕೆಲ ಅಂಗಡಿ ಹಾಗೂ ಮೆಡಿಕಲ್ ಗಳ ಜೊತೆ ಕೈ ಜೋಡಿಸಿದ್ದು, ಈ ಅಂಗಡಿಗಳ ಮೊಬೈಲ್ ನಂಬರ್ ಅನ್ನು ಸ್ಮಾರ್ಟ್ ಬಂಟ್ವಾಳದ ಆನ್ಲೈನ್ ಪೇಜ್ ನಲ್ಲಿ ನಮೋದಿಸಿದ್ದು, ಗ್ರಾಹಕರು ಆ ನಂಬರಿಗೆ ಚೀಟಿಯನ್ನು ಕಳುಹಿಸಿ ಎಲ್ಲಿಗೆ ಒದಗಿಸಿಬೇಕು ಎಂದು ನಮೋದಿಸಿದರೆ ಮರುದಿನ ಅಂಗಡಿಯಿಂದ ಪಟ್ಟಿಯಲ್ಲಿ ನಮೋದಿಸಿದ ವಸ್ತುಗಳನ್ನು ಆಟೋದಲ್ಲಿ ಕಳುಹಿಸಲಾಗುತ್ತದೆ. ಆಟೋ ದರ 35ರೂ.ಯಾಗಿದ್ದು, ಬಂಟ್ವಾಳದ ಸುತ್ತಮುತ್ತ ಪರಿಸರದಲ್ಲಿ ಈ ಕಾರ್ಯ ನಡೆಯುತ್ತಿದೆ. ಈಗಾಗಲೇ ಪ್ರಾಯೋಗಿಕವಾಗಿ ಕೆಂಪುಗುಡ್ಡೆ, ಲೊರೆಟ್ಟೊ, ಗಾಣದಪಡ್ಪು, ಕೆಳಗಿನ ಪೇಡೆ, ಬೈಪಾಸ್, ಜಕ್ರಿಬೆಟ್ಟು, ಅಗ್ರಾರ್, ಹಳೇಪೇಟೆ, ಕರೆಂಕಿ, ಅಲ್ಲಿಪಾದೆ ಮಾರ್ಗದವರಿಗೆ ಈ ಶಾಪಿಂಗ್ ಮಾಡಲು ಅವಕಾಶವಿದೆ.






