ಬಂಟ್ವಾಳ: ತಾಲೂಕಿನ ದೇವಶ್ಯಮೂಡುರು ಗ್ರಾಮದ ಜನತಾ ಕಾಲೋನಿಯ ನಿವಾಸಿ ಪೂವಪ್ಪ ಪೂಜಾರಿ ಅವರ ಮನೆ ಕುಸಿಯುವ ಸ್ಥಿತಿಯಲ್ಲಿದ್ದು, ಮನೆಯನ್ನು ಹಿರಿಯರ ಮಾರ್ಗದರ್ಶನದೊಂದಿಗೆ ಮುಲ್ಕಜೆಮಾಡ ಶ್ರೀ ಓಂ ಶಕ್ತಿ ಫ್ರೆಂಡ್ಸ್ ನ ಸದಸ್ಯರು ಶ್ರಮದಾನದ ಮೂಲಕ ಮನೆಯ ಮೇಲ್ಛಾವಣಿಯನ್ನು ಸರಿಪಡಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿ ಸಂಘಟನೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮನೆಯ ದುರಸ್ತಿಗೆ ನೆರವಿನ ಹಸ್ತ ನೀಡಿದರು.
ಈ ಸಂದರ್ಭದಲ್ಲಿ ದೇವಶ್ಯಮೂಡೂರು ಗ್ರಾಮದ 200 ಮನೆಗಳಿಗೆ ದಿನಬಳಕೆ ಸಾಮಾಗ್ರಿಗಳ ಕಿಟ್ ವಿತರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here