ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ : ಆಪತ್ಬಾಂಧವ 108 ಅಂಬುಲೆನ್ಸ್ ಬಂಟ್ವಾಳ.
ಬಂಟ್ವಾಳ: ನಿಜಕ್ಕೂ 108 ಅಂಬ್ಯುಲೆನ್ಸ್ ನ ಸಿಬ್ಬಂದಿ ಗಳ ಕಾರ್ಯ ಜನಮೆಚ್ಚುಗೆ ಪಡೆಯಿತು.
ಸಂದಿಗ್ಧ ಸಮಯದಲ್ಲಿ ಕರೆಗೆ ಸ್ಪಂದಿಸಿ ಹೆರಿಗೆ ನೋವು ಕಾಣಿಸಿಕೊಂಡಿದ್ದ ತಾಯಿಗೆ ಹೆರಿಗೆ ಮಾಡಿಸಿದ ಮಹತ್ಕಾರ್ಯ ನಿಜಕ್ಕೂ ಅಭಿನಂದನೀಯ.
ಇಂತಹ ಕೆಲಸಗಳನ್ನು ಜನ ಯಾವಾಗಲೂ ಗುರುತಿಸುತ್ತಾರೆ, ನೆನಪಿಟ್ಟುಕೊಳ್ಳುತ್ತಾರೆ.
108 ಅಂಬುಲೆನ್ಸ್ ನ ಚಾಲಕರಾದ ಭೀಮಪ್ಪ ಹಾಗೂ ಶುಶ್ರೂಕ ರಾದ ಮಂಜುನಾಥ ಅವರಿಗೆ ಊರವರಿಂದ ಅಭಿನಂದನೆಯ ಮಹಾಪೂರವೇ ಹರಿಯಿತು.

*ಘಟನೆಯ ವಿವರ*
ಮೇ 18ರ ಬೆಳಗಿನ ಜಾವ ಸುಮಾರು 6:00 ಗಂಟೆ ಸಮಯಕ್ಕೆ ಪಂಜಿಕಲ್ಲು ಬಂಟ್ವಾಳ ತಾಲೂಕಿನಲ್ಲಿ ಹೆರಿಗೆ ನೋವು ಎಂದು ಬಂಟ್ವಾಳ 108 ಆಂಬುಲೆನ್ಸ್ ಗೆ ಕರೆಬಂದಿತ್ತು.
ತಕ್ಷಣ 108 ಅಂಬುಲೆನ್ಸ್ ನ ಚಾಲಕರಾದ ಭೀಮಪ್ಪ ಹಾಗೂ ಶುಶ್ರೂಕ ರಾದ ಮಂಜುನಾಥ ಇವರು ಶೀಘ್ರದಲ್ಲೇ ಸಮಯಪ್ರಜ್ಞೆ ಯಿಂದ ತಕ್ಷಣ ಪಂಜಿಕಲ್ಲು ಗ್ರಾಮಕ್ಕೆ ಹೋಗಿ ಹೆರಿಗೆ ನೋವು ಕಾಣಿಸಿಕೊಂಡ ಗೀತಾ ರವರಿಗೆ ತೀವ್ರ ಹೆರಿಗೆ ನೋವು ಇದ್ದ ಕಾರಣ ಮನೆಯಲ್ಲಿ ಹೆರಿಗೆ ಮಾಡಿಸಿದರು.
ಅವರ ಮನೆಗೆ ಸುಮಾರು ಅರ್ಧ ಕಿಲೋಮೀಟರ್ ನಡೆದುಕೊಂಡು ಹೋಗಿ ಹೆರಿಗೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇತ್ತು.
ಕಾರಣ ಯಾವುದೇ ರೀತಿಯ ನಾಲ್ಕು ಚಕ್ರ ವಾಹನ ಹೋಗುವ ಸರಿಯಾದ ದಾರಿ ಅವರ ಮನೆಗೆ ಇರಲಿಲ್ಲ.
ಹೆರಿಗೆಯಾದ
ತಾಯಿ-ಮಗು ಆರೋಗ್ಯದಿಂದಿದ್ದು ತಾಯಿ ಮತ್ತು ಮಗುವನ್ನು ಅಂಬುಲೆನ್ಸ್ ವಾಹನದಲ್ಲಿ ಕರೆದುತಂದು ಹೆಚ್ಚಿನ ಚಿಕಿತ್ಸೆಗೆ ಬಂಟ್ವಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ..
ತಾಯಿ ಮತ್ತು ಮಗು ಆರೋಗ್ಯದಿಂದಿದ್ದಾರೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.
108 ಆರೋಗ್ಯ ಕವಚದ ಸಿಬ್ಬಂದಿ ಚಾಲಕ ಭೀಮಪ್ಪ ಹಾಗೂ ಶುಶ್ರೂಷಕ ಸುರಕ್ಷಿತ ಹೆರಿಗೆಯನ್ನು ಮಾಡಿದ್ದು ಇವರ ಮಾನವೀಯ ಕಾರ್ಯಕ್ಕೆ ಗ್ರಾಮದ ಜನರಿಂದ ಶ್ಲಾಘನೀಯ ಮಾತು ವ್ಯಕ್ತವಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here