ಒಬ್ಬ ಪರಿಣಾಮಕಾರಿ ಆಡಳಿದಾರ ದೇಶದ ಪ್ರಗತಿಯಲ್ಲಿ ಸಾರ್ವಜನಿಕ ಪಾಲುದಾರಿಕೆಯನ್ನೂ ಬಯಸುತ್ತಾನೆ; ತಾನು ಮುಂದುವರಿಯುವದರೊಂದಿಗೆ ಇತರರನ್ನೂ ತನ್ನ ವ್ಯಕ್ತಿತ್ವ ಮಾತ್ರದಿಂದ ಸೆಳೆಯುತ್ತಾನೆ. ಇಂತಹ ಸಂದರ್ಭಗಳಲ್ಲಿ ಆತ್ಮಾವಲೋಕನ ಆತ್ಮದ ಅರಿವು ಆತ್ಮಸ್ಥೈರ್ಯ ಇವೆಲ್ಲವನ್ನೂ ಜಾಗೃತಗೊಳ್ಳುವಂತೆ ಪರಿಸರವನ್ನು ನಿರ್ಮಣಮಾಡಬೇಕಾಗುತ್ತದೆ. ಇದನ್ನು ನೀವು ಅಧ್ಯಾತ್ಮವಾದವೆನ್ನಿ ಲೌಕಿಕವಾದವೆನ್ನಿ; ಇದು ಆತ್ಮ ನಿರ್ಭರ.
ಕೊರೊನದಿಂದ ಮುದುಡಿ ನಿರಾಶರಾದ ಮಂದಿಗೆ ನಿಮ್ಮ ಮಿಡಿತ ನಿಮ್ಮ ದುಡಿತ, ಅದು ಸ್ವಾಲಂಬಿ ಬದುಕಿಗಾಗಿ ಸ್ವದೇಶಿ ಮಂತ್ರ. ತಮ್ಮನ್ನೇ ತಾವು ಮರೆತ ಜನತೆಗೆ ಅವರವರ ಶಕ್ತಿ ಸಾಮರ್ಥ್ಯಗಳು ಪುಟಿದೇಳುವಂತೆ ಮಾಡುವ ಪ್ರಧಾನಿಯವರ ಅನುಷ್ಠಾನ ಯೋಗ್ಯ ಪರಿಣಾಮಕಾರಿ ಮಾತುಗಳು ಆತ್ಮಸ್ಥೈರ್ಯವನ್ನು ತುಂಬುವಂತಹದ್ದು. ಘೋಷಿತವಾದ ಇಪ್ಪತ್ತು ಲಕ್ಷ ಕೋಟಿಯನ್ನು ಹಣದ ರೂಪದಲ್ಲಿ ಮಾಪನ ಮಾಡುವುದಲ್ಲ, ನಿರಾಶೆ ಹೊಂದಿದ ಮನಸ್ಸನ್ನು ಆತ್ಮ ಸ್ಥೈರ್ಯವನ್ನು ತುಂಬಿ ದೇಶ ಕಟ್ಟುವ ಕಾಯಕಕ್ಕೆ ಸಿದ್ದಗೊಳಿಸುವ ಇರಾದೆಯಿದು. ಇದು ನಾಯಕನೊಬ್ಬ ಇಡೀ ಸಮುದಾಯಕ್ಕೆ ಮಾಡಬಹುದಾದ ಬಹುದೊಡ್ಡ ಕಾರ್ಯ. ಮೊದಲು ಜನಗಳ ಮನಸ್ಸನ್ನು ಗುಣಾತ್ಮಕವಾಗಿ ಕಟ್ಟಬೇಕು, ನಂತರ ದೇಶ ಕಟ್ಟುವ ಕಾಯಕ. ಕೊರೊನ ದಬ್ಬಾಳಿಕೆ ಮಾತ್ರವಲ್ಲ ನಮ್ಮನ್ನು ನಾವು ಸದ್ಬಳಕೆಮಾಡಿಕೊಳ್ಳುವಲ್ಲೂ ಎಚ್ಚರಿಸಿದೆ. ಈಗ ನಾವು ಎಚ್ಚತ್ತುಕೊಳ್ಳಬೇಕು, ಇಸಂ ಅಹಂ ಬಿಡಬೇಕು. ಎಲ್ಲರ ಬೇಡಿಕೆಯನ್ನು ಆಯಾಯ ವರ್ಗದ ಜನಗಳನ್ನು ವಿಭಾಗ ಮಾಡಿ ಈಡೇರಿಸುವುದು ಸಾಧ್ಯವಿಲ್ಲ, ಎಲ್ಲರಿಗೂ ಅವಶ್ಯಕವಾದುದನ್ನು ಈಡೇರಿಸುವುದು ದೀರ್ಘ ಕಾಲದಲ್ಲಿಉತ್ತಮ ಫಲಿತಾಂಶವನ್ನೇ ನೀಡುತ್ತದೆ. ಬೆಳಕು ಚೆಲ್ಲಿಯಾಗಿದೆ, ಬೆಳಕಿನ ದಾರಿಯಲ್ಲಿ ಮುನ್ನೆಡೆಯುವುದು ನಮ್ಮ ಜವಾಬ್ದಾರಿ. ಸ್ವಯಂ ಘೋಷಿತ ಸಂಭಾವಿತರಿಗೆ, ಲಕ್ಷದ ಮೇಲೆ ಲಕ್ಷ್ಯವಿಟ್ಟ್ವರಿಗೆ ಮತ್ತು ನಾಯಕನ ಕನ್ನಡಕ, ಆತ ಧರಿಸುವ ದಿರಸು ಇತ್ಯಾದಿಗಳ ಕುರಿತು ತಲೆ ಕೆಡಿಸಿಕೊಳ್ಳುವವರಿಗೆ ಈ ವಾಸ್ತವ ಅಥವಾ ನಾಯಕನ ಮಾತು ಹಾಗೂ ಘೋಷಿತ ಆರ್ಥಿಕ ಪ್ಯಾಕೇಜಿನ ಹಿನ್ನೆಲೆ ಅರ್ಥವಾಗಲಿಕ್ಕಿಲ್ಲ. ಬದಲಾದ ಕಾಲಕ್ಕೆ ಕೊರೊನವನ್ನು ಎದುರಿಸುತ್ತಲೇ ಜೀವನವನ್ನು ಹೊಂದಿಸಿಕೊಂಡು ದೇಶವನ್ನು ಕಟ್ಟುವ ತುರ್ತು ಇಂದಿನದ್ದು.

 

ರಾಜಮಣಿ ರಾಮಕುಂಜ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here