


ಬಂಟ್ವಾಳ : ಕೋವಿಡ್19 ವಿರುದ್ದ ಸಂಘಟಿತರಾಗಿ ತಾಲೂಕಿನ ಎಲ್ಲಾ ಇಲಾಖೆಗಳು ಕೆಲಸ ಮಾಡಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು. ಅವರು ಬಂಟರ ಭವನದಲ್ಲಿ ಕರೆದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಕೋವಿಡ್ 19 ನ್ನು ಹಿಮ್ಮೆಟ್ಟಿಸಲು ಬಂಟ್ವಾಳ ತಾಲೂಕಿನ ಎಲ್ಲಾ ಇಲಖಾ ಅಧಿಕಾರಿಗಳು ಒಂದೇ ಮನಸ್ಸಿನಿಂದ ಕೆಲಸ ಮಾಡಬೇಕಾಗಿದೆ.
ಯಾವುದೇ ಸಂದರ್ಭದಲ್ಲಿ ಯೂ ಉದಾಸೀನ ಮನೋಭಾವ ತೋರದೆ ಸಮಸ್ಯೆ ಗಳಿಗೆ ಸ್ಫಂದಿಸಿ ಎಂದು ಅವರು ತಿಳಿಸಿದರು.
ಬೇರೆ ರಾಜ್ಯದಿಂದ ಬರುವ ವ್ಯಕ್ತಿಗಳಿಗೆ ಪ್ರಥಮ ಹಂತದ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.
ಅಯಾಯ ಗ್ರಾಮ ಪಂಚಾಯತ್ ಮಟ್ಟದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಇದರ ಸಂಪೂರ್ಣ ಮೇಲುಸ್ತುವಾರಿ ಯನ್ನು ಪಂಚಾಯತ್ ಮಟ್ಟದ ಪಿ.ಡಿ.ಒಗಳು ಮಾಡಬೇಕು ಎಂದು ಅವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಬೇರೆ ರಾಜ್ಯದಿಂದ ಎರಡನೇ ಹಂತದಲ್ಲಿ ಬರುವಂತಹ ವ್ಯಕ್ತಿಗಳಿಗೂ ಇದೇ ಮಾದರಿಯಲ್ಲಿ ವ್ಯವಸ್ಥೆ ಮಾಡಬೇಕಾಗುತ್ತದೆ ಅಸಂದರ್ಭಗಳಲ್ಲಿಯೂ ಹೊಣೆ ಗಾರಿಕೆ ಪಿ.ಡಿ.ಒ.ಗಳ ಮೇಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ. ಎಸ್.ಆರ್.ತಾಲೂಕು ವೈದ್ಯಾಧಿಕಾರಿ ದೀಪಾ ಪ್ರಭು ಮತ್ತು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ರಾಜಣ್ಣ ಉಪಸ್ಥಿತರಿದ್ದರು





