ಕಿನ್ಸ್ ಫೌಂಡೇಶನ್ ಸಂಸ್ಥೆಯ ಅಲ್ತಾಫ್ ಉಳ್ಳಾಲರವರ ಸಹಕಾರದೊಂದಿಗೆ ಹಾಗೂ ಶಾಸಕ ಯು.ಟಿ.ಖಾದರ್ ರವರ ಸಲಹೆಯ ಮೇರೆಗೆ ಸುಮಾರು 1200 ವಲಸೆ ಕಾರ್ಮಿಕರಿಗೆ ನಿನ್ನೆ ಮತ್ತು ಇವತ್ತು ಆಹಾರ ಮತ್ತು ಬೆಳಗಿನ ಉಪಹಾರವನ್ನು ಬಂಟ್ವಾಳ ಬಂಟರ ಭವನದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯಕ್ ರವರು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಸಜೀಪ ಮುನ್ನೂರು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪೆರಿಮಾರ್,  ಮುಡಿಪು ಬ್ಲಾಕ್ ಅಧ್ಯಕ್ಷ ಇಂತಿಯಾಜ್ ತುಂಬೆ, ಪುದು ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಸುಜೀರ್ ಜಹೀರ್ ಕುಂಪನಮಾಜಲ್ ರಿಯಾಜ್ ಕುಂಪನಮಾಜಲ್ ಮಹಮ್ಮದ್ ಮೋನು ಫರಂಗಿಪೇಟೆ ಹಾಗೂ ಲತೀಫ್ ಅರಫ,  ಪ್ರಕಾಶ್ ಶೆಟ್ಟಿ ತುಂಬೆ,  ಕಾಶಿಂ ಶಾಂತಿಅಂಗಡಿ,  ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೌಕತ್ಆಲಿ ಪಾಡಿ, ಯುವ ಕಾಂಗ್ರೆಸ್ ಸದಸ್ಯರಾದ ಮಜೀದ್ ಪೇರಿಮರ್ ಇಸ್ಮಾಯಿಲ್ ಕುಂಜತ್ಕಲ್ ಅಶ್ವದ್ ಫರಂಗಿಪೇಟೆ ಆಶಿಮ್ ಮಾರಿಪಳ್ಳ ಜಹೀರ್ ಮಾರಿಪಳ್ಳ ಅಶ್ರಫ್ ಮಲ್ಲಿ ಇಮ್ರಾನ್ ಮಾರಿಪಳ್ಳ ಹಾಗೂ ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್.ಬಂಟ್ವಾಳ ಗ್ರಾಮಾಂತರ ಠಾಣೆಯ ಎಸೈ ಪ್ರಸನ್ನಕುಮಾರ್ ಬಂಟ್ವಾಳ ನಗರ ಠಾಣೆಯ ಎಸೈ ಅವಿನಾಶ್ ಹಾಗೂ ಮುಂತಾದವರು ಉಪಸ್ಥಿತಿದ್ದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here