






ದುಬೈ ಹೊರತುಪಡಿಸಿ ಸುರತ್ಕಲ್ ಮೂಲದ ಓರ್ವ ಮಹಿಳೆಗೆ ಪಾಸಿಟಿವ್ ಪ್ರಕರಣದಲ್ಲಿ 69 ವರ್ಷದ ಮಹಿಳೆಗೆ ಸೋಂಕು ದೃಢ ಮಂಗಳೂರು ಹೊರವಲಯದ ಸುರತ್ಕಲ್ ಪ್ರದೇಶದ ಮಹಿಳೆ, ಜಿಲ್ಲೆಯಲ್ಲಿ ಒಟ್ಟು 16 ಪ್ರಕರಣಗಳಲ್ಲಿ 15 ದುಬೈ ಮತ್ತು ಒಂದು ಸುರತ್ಕಲ್.
ಮೇ 18 ರಂದು ದುಬೈನಿಂದ ಮತ್ತೊಂದು ವಿಮಾನ ಬರಲಿದೆ. ಮಂಗಳೂರಿಗೆ ಮತ್ತೊಂದು ವಿಮಾನ ಬರಲಿದೆ,171 ಮಂದಿ ಪ್ರಯಾಣಿಕರು ಮಂಗಳೂರಿಗೆ ಬರಲಿದ್ದಾರೆ,ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮಾಹಿತಿ
ಮಂಗಳೂರು: ಮಂಗಳೂರು ಇಂದು 16 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಕಳೆದ ಎರಡು ದಿನಗಳ ಹಿಂದೆ ವಿದೇಶದಿಂದ ಭಾರತಕ್ಕೆ ಬಂದ 15 ಪ್ರಯಾಣಿಕರಲ್ಲಿ ಕೊರೊನಾ ಸೊಂಕು ದೃಡಪಟ್ಟಿದೆ. ವಿದೇಶದಲ್ಲಿ ಸಿಲುಕಿದ್ದ 178 ಮಂದಿಯನ್ನು ಎರಡು ದಿನಗಳ ಹಿಂದೆಯಷ್ಟೇ ತಾಯ್ನಾಡಿಗೆ ವಿಶೇಷ ವಿಮಾನ ಮೂಲಕ ಕರೆಸಿಕೊಂಡಿತು. 178 ಮಂದಿ ಪ್ರಯಾಣಿಕರ ಪೈಕಿ 123 ಪ್ರಯಾಣಿಕರು ಮಂಗಳೂರಿಗರು. ವಿದೇಶದಿಂದ ಬಂದ ಎಲ್ಲರನ್ನು ಕೂಡಾ ಕ್ವಾರಂಟೈನ್ ಮಾಡಲಾಗಿತ್ತು.
8 ಹೋಟೆಲ್, ಒಂದು ಖಾಸಗಿ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಆದರೆ ಕ್ವಾರಂಟೈನ್ ಮಾಡಲಾಗಿರುವ ವ್ಯಕ್ತಿಗಳ ಪೈಕಿ 15 ಜನರಲ್ಲಿ ಇಂದು ಕೊರೊನಾ ಸೊಂಕು ದೃಡಪಟ್ಟಿದೆ.
ವಿದೇಶದಿಂದ ಬಂದಿರುವ ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿ ಬಳಿಕ ಅವರ ಗಂಟಲು ದ್ರವರೂಪದ ಮಾದರಿ ಸಂಗ್ರಹಿಸಿ ಬಳಿಕ ಪರೀಕ್ಷೆ ಗಾಗಿ ಲ್ಯಾಬೋರೇಟರಿ ಗೆ ಕಳುಹಿಸಿಕೊಡಲಾಗಿತ್ತು.
ಈವರೆಗೆ ಫಸ್ಟ್ ನ್ಯೂ ರೋ ಆಸ್ಪತ್ರೆ ಯಿಂದ ಕಂಗೆಟ್ಟಿದ್ದ ಜಿಲ್ಲೆಗೆ ಮತ್ತೊಂದು ಶಾಕಿಂಗ್ ನ್ಯೂಸ್ ಇದಾಗಿದೆ.
ದಿನಕಳೆದಂತೆ ಜಿಲ್ಲೆಯ ಲ್ಲಿ ಕೊರೊನಾ ಪಾಸಿಟಿವ್ ಸೊಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ವಿನಃ ಕಡಿಮೆಯಾಗುತ್ತಿಲ್ಲ ಎಂಬ ಆತಂಕದಲ್ಲಿ ಜನರಿದ್ದಾರೆ. ಮೇ.12 ರಂದು ರಂದು ದುಬೈ ನಿಂದ ಏರ್ ಲಿಪ್ಟ್ ಅಗಿದ್ದ ಮಂಗಳೂರಿಗರು.
15 ಮಂದಿ ದುಬೈ ರಿಟರ್ನ್ಸ್ ಮತ್ತು ಒಂದು ಬೇರೆ ಸಂಪರ್ಕ ದಿಂದ ಸೊಂಕು ಸದ್ಯ ದ.ಕ.ಜಿಲ್ಲೆಯ ಲ್ಲಿ ಸಕ್ರಿಯ ಪ್ರಕರಣಗಳು 29 ಕ್ಕೆ ಏರಿದೆ.
ದ.ಕ ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಪಾಸಿಟಿವ್ ಕೇಸ್ ಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ದ.ಕ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರು 5 ಮಂದಿ, ಫಸ್ಟ್ ನ್ಯೂರೋ ಸಂಪರ್ಕದಿಂದ ಸೋಂಕು ತಗುಲಿ ಸಕ್ರಿಯ ಪ್ರಕರಣ 13.





