ಬಂಟ್ವಾಳ: ರಾಜ್ಯದಲ್ಲಿ ಇಂದು 22 ಹೊಸ ಕೊರೊನ ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 981ಕ್ಕೆ ಏರಿಕೆಯಾಗಿದೆ.
ಬೆಂಗಳೂರು 5, ಮಂಡ್ಯ, ಗದಗ, ಬೀದರ್ ತಲಾ 4, ದಾವಣಗೆರೆ 3, ಬಾಗಲಕೋಟೆ, ಬೆಳಗಾವಿ ತಲಾ 1 ಕೊರೋನಾ ಸೋಂಕು ದೃಢಪಟ್ಟಿದೆ. ದ.ಕ. ಜಿಲ್ಲೆಯಲ್ಲಿ ಇಂದು ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ.

ರಾಜ್ಯದಲ್ಲಿ ಇಂದು ಸೋಂಕಿಗೆ ಇಬ್ಬರ ಬಲಿಯಾಗಿದ್ದು, ಒಬ್ಬರು ಬೆಂಗಳೂರು ಹಾಗೂ ಇನ್ನೊಂದು 80 ವರ್ಷದ ಮಂಗಳೂರಿನ ವೃದ್ಧೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here