ಬಂಟ್ವಾಳ: ಮಹಾಮಾರಿ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಈಗಾಗಲೇ 3ನೇ ಹಂತದ ಲಾಕ್ ಡೌನ್ ಘೋಷಿಸಿದ್ದು, ಮೇ.17 ಕ್ಕೆ ಮುಕ್ತಯವಾಗಲಿದೆ. ಅದಕ್ಕೂ ಮುನ್ನ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಇಂದು ರಾತ್ರಿ 8 ಗಂಟೆಗೆ ಮಾತನಾಡಿದರು.

ಒಂದು ಚಿಕ್ಕ ವೈರಸ್ ನಿಂದ ವಿಶ್ವದಲ್ಲಿ 42 ಲಕ್ಷ ಜನ ಕೊರೊನಾ ದಾಳಿಯಲ್ಲಿದ್ದು, ವಿಶ್ವವೇ ತಲ್ಲಣಗೊಂಡಿದೆ. ಭಾರತವೂ ಸಹ ಇದೇ ಪರಿಸ್ಥಿತಿಯ ಸಂಕಷ್ಟ ಅನುಭವಿಸಿದೆ. ಕೊರೊನಾದಿಂದ ಸಾಕಷ್ಟು ಜನರನ್ನು ಕಳೆದುಕೊಂಡಿದ್ದೇವೆ ಎಂದು ಮಾತು ಪ್ರಾರಂಭಿಸಿದ ಅವರು ನಾವು ಉಳಿಯಬೇಕೆಂದರೆ ನಾವು ಇನ್ನಷ್ಟು ದಿಟ್ಟ ನಿರ್ಧಾರ ಕೈಗೊಳ್ಳಬೇಕಿದೆ.

21ನೇ ಶತಮಾನ ಭಾರತ ಇಡೀ ವಿಶ್ವಕ್ಕೆ ಮಾದರಿಯಾಗಬೇಕಿದೆ. ನಮ್ಮ ಶಾಸ್ತ್ರಗಳಲ್ಲಿ ಹೇಳಿದಂತೆ ಸ್ವಾವಲಂಬಿಗಳಾಗಬೇಕಿದೆ. ಸಕಾರಾತ್ಮಕವಾಗಿ ಹೋರಾಡಬೇಕಿದೆ. ನಮ್ಮ ಸಂಸ್ಕೃತಿ ಸಂಸ್ಕಾರ ಸ್ವಾವಲಂಬಿತನವನ್ನು ಎತ್ತಿ ಹಿಡಿದಿದೆ. ವಿಶ್ವವೇ ಒಂದು ಕುಟುಂಬ ಎಂದು ನಂಬಿರುವ ನಾವು ಸುಖ ಸಮೃದ್ದಿಯ ವಿಶ್ವವನ್ನು ಆದ್ಯತೆ ಕನಸು ಹೊರಬೇಕಾಗಿದೆ. ಭಾರತೀಯರು ಭೂಮಿಯನ್ನು ತಾಯಿಯಂತೆ ಪೂಜಿಸುತ್ತಾರೆ. ಭಾರತದ ಅಭಿವೃದ್ದಿ ವಿಶ್ವದ ಅಭಿವೃದ್ಧಿ. ಭಾರತದ ಹಣೆಬರಹ ಬದಲಾದರೆ ವಿಶ್ವದ ಹಣೆಬರಹ ನಿರ್ಧಾರವಾಗುತ್ತೆ. ಶತಮಾನದ ಆರಂಭದಲ್ಲಿ Y2K ಸಮಸ್ಸೆ ಬಂದಿತ್ತು. ಅದರ ವಿರುದ್ದದ ಹೋರಾಟದಲ್ಲಿ ನಮ್ಮ ತಂತ್ರಜ್ಞರು ಗೆದ್ದಿದ್ದರು. ಭಾರತದಲ್ಲಿರುವಷ್ಟು ಪ್ರತಿಭೆಗಳು ಬೇರೆಲ್ಲೂ ಇಲ್ಲ. ಕೊರೊನಾ ವಿರುದ್ದದ ಹೋರಾಟದಲ್ಲಿ ವಿಶ್ವವೇ ನಮಗೆ ಗೌರವಿಸಿದೆ ಎಂದರು.

ಮೋದಿ ಐದು ಸ್ತಂಬಗಳ ಸೂತ್ರ
* ಆರ್ಥಿಕತೆ, ಮೂಲಸೌಕರ್ಯ, ತಂತ್ರಜ್ಞಾನ ಆದಾರಿತ ವ್ಯವಸ್ಥೆ, ಜನಸಂಖ್ಯೆ ಮತ್ತು ಬೇಡಿಕೆ.
*20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಣೆ.
*ಭೂಮಿಗೆ, ಹಣದ ಹರಿವೆ, ಸಣ್ಣ ಉದ್ದಿಮೆಗಳ ನೆರವಿಗೆ ಪ್ಯಾಕೇಜ್.
* ಶ್ರಮಿಕರಿಗೆ, ಕಾರ್ಮಿಕರಿಗೆ, ರೈತರಿಗೆ ವಿಶೇಷ ಪ್ಯಾಕೇಜ್.
*ಹಗಲಿರುಳು ದುಡಿಯುವವರಿಗೆ, ಮದ್ಯಮ ವರ್ಗಕ್ಕೆ ಪ್ಯಾಕೇಜ್.
* ಸರ್ಕಾರ ನೀಡುವ ಪ್ರತಿ ಪೈಸೆ ಸರಿಯಾಗಿ ಬಡವರಿಗೆ ತಲುಪಲಿದೆ.

ನಾಳೆ ಆರ್ಥಿಕ ಪ್ಯಾಕೇಜ್ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ. ಸ್ವಾವಲಂಭಿ ಭಾರತ ನಿರ್ಮಾಣಕ್ಕೆ ಆರ್ಥಿಕ ಪ್ಯಾಕೇಜ್ ಬಿಡುಗಡೆಗೊಳಿಸಲಿದ್ದಾರೆ.

ಹೊಸ ಭಾರತದ ಕನಸು
ಸ್ಥಳಿಯ ಉತ್ಪಾದನೆ, ಸ್ಥಳೀಯ ಮಾರುಕಟ್ಟೆಗೆ ಹೆಚ್ಚಿನ ಆದ್ಯತೆ. ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ದೇಶೀ ಪೂರೈಕೆ ವ್ಯವಸ್ಥೆ ಕಾಪಾಡಿದೆ. ಕೊರೊನಾ ವಿರುದ್ದ ಭಾರತ ಗೆಲ್ಲಲಿದೆ ಎಂದರು.

ಲಾಕ್ ಡೌನ್ 4.O ಹೊಸ ರೀತಿಯಲ್ಲಿ ಬರಲಿದ್ದು, ಲಾಕ್ ಡೌನ್ 4ನೇ ಆವೃತ್ತಿಯ ಮಾರ್ಗಸೂಚಿಗಳನ್ನು ಇನ್ನಷ್ಟೇ ನಿರ್ಧರಿಸಬೇಕಿದೆ. ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪ್ರಧಾನಿ ಈ ಬಗ್ಗೆ ನಿರ್ಧರಿಸಲಿದ್ದಾರೆ. ಈ ಬಗ್ಗೆ ಮಾರ್ಗಸೂಚಿ ಮೇ.18ರ ಮುಂಚಿತವಾಗಿ ಬರುವ ನಿರೀಕ್ಷೆ ಇದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here