ಬಂಟ್ವಾಳ: ವಿಶ್ವ ದಾದಿಯರ ದಿನಾಚರಣೆ ಅಂಗವಾಗಿ ಬಿಸಿರೋಡು ಕೆ.ಎಸ್.ಆರ್.ಟಿ.ಬಸ್ ನಿಲ್ದಾಣದ ಲ್ಲಿ ತಾಲೂಕು ಆಡಳಿತ ಹಾಗೂ ಪೋಲೀಸ್ ಇಲಾಖಾ ವತಿಯಿಂದ ಬಂಟ್ವಾಳ ತಾಲೂಕಿನ ದಾದಿಯರಿಗೆ ಹೂ ಹಾಗೂ ಸಿಹಿತಿಂಡಿ ತಿನ್ನಿಸುವ ಮೂಲಕ ಆಚರಣೆ ನಡೆಸಿ ಶುಭಾಶಯ ಕೋರಿದರು.

ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್ ಹಾಗೂ ಐ.ಪಿ.ಎಸ್.ರಂಜಿತ್ ಬಂಡಾರು, ಬಂಟ್ವಾಳ ಡಿ.ವೈ.ಎಸ್.ಪಿ.ವೆಲಂಟೈನ್ ಡಿ.ಸೋಜ ಅವರು ಶುಭಾಶಯ ಕೋರಿದರು.
ಇಂದು ಬಿಹಾರ ಮೂಲದ ಸುಮಾರು 624 ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವುಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಬಿಹಾರ ಮೂಲದ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಗೆಂದು ಬಿಸಿರೋಡು ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣಕ್ಕೆ ಬಂದಿದ್ದ ದಾದಿಯರಿಗೆ ಹೂ, ಸಿಹಿ.ತಿಂಡಿ ನೀಡಿ ದಾದಿಯರ ದಿನಾಚರಣೆ ಅಂಗವಾಗಿ ಶುಭಾಶಯ ಕೋರಿದರು.
ಸುಮಾರು 17 ಸರಕಾರಿ ಬಸ್ ಮೂಲಕ ಬಿಹಾರ ಮೂಲದ ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗಾರಾಜ್, ಬಂಟ್ವಾಳ ನಗರ ಪೋಲೀಸ್ ಠಾಣಾ ಎಸ್.ಐ.ಅವಿನಾಶ್ , ಗ್ರಾಮಾಂತರ ಎಸ್.ಐ.ಪ್ರಸನ್ನ, ಅಪರಾಧ ವಿಭಾಗದ ಎಸ್.ಐ.ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here