ಬೆಳ್ತಂಗಡಿ: ಮಡಂತ್ಯಾರು ಗ್ರಾಮ‌ ಪಂಚಾಯತ್ ವ್ಯಾಪ್ತಿಯ ಕುಕ್ಕಳ ಮತ್ತು ಪಾರೆಂಕಿ ಗ್ರಾಮಗಳಿಗೆ ಹೊರ ರಾಜ್ಯದ ನಾಗರೀಕರು ಆಗಮಿಸಿದಾಗ ಅವರಿಗೆ 14 ದಿನಗಳ ಕಾಲ ಕ್ವಾರೆಂಟನ್ ಮಾಡಲು ಸೇಕ್ರೆಡ್ ಹಾರ್ಟ್ ಕಾಲೇಜಿನ ಇಂಡೋರ್ ಸ್ಟೇಡಿಯಂ ಅನ್ನು ಸಿದ್ದಪಡಿಸಲಾಗಿದೆ.
ಈ ಕ್ರೀಡಾಂಗಣದಲ್ಲಿ ಸುಸಜ್ಜಿತ ಆರು ಕೊಠಡಿ ಇದ್ದು, ಎರಡು ಹಾಲ್, 22 ಟಾಯ್ಲೆಟ್ ಹಾಗೂ ಬಾತ್ರೂಮ್ ವ್ಯವಸ್ಥೆ ಇದೆ. ಕುಡಿಯುವ ನೀರಿನ ಫಿಲ್ಟರ್ ವ್ಯವಸ್ಥೆ ಇದ್ದು, ಭದ್ರತೆಗಾಗಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ.

ಈ ವ್ಯವಸ್ಥೆಯ ಉಸ್ತುವಾರಿಯನ್ನು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಆಡಳಿತ ಮಂಡಳಿಯ ಸಹಕಾರದಲ್ಲಿ ಕಾಲೇಜಿನ ಪ್ರಾಚಾರ್ಯ ಅಲೆಕ್ಸ್ ಐವನ್ ಸಿಕ್ವೆರಾ ಹಾಗೂ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಎಂ. ನಾಗೇಶ್ ವಹಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here