ಮಂಗಳೂರು: ಬ್ಯಾಂಕ್ ಗಳಲ್ಲಿ ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ.) ತನ್ನ ‘ಎಸ್‌ಬಿಐ ತುರ್ತು ಸಾಲ ಯೋಜನೆ’ ಅಡಿಯಲ್ಲಿ ತನ್ನ ಗ್ರಾಹಕರಿಗೆ 45 ನಿಮಿಷಗಳಲ್ಲಿ 5 ಲಕ್ಷ ರುಪಾಯಿವರೆಗೆ ಸಾಲವನ್ನು ನೀಡಲಿದೆ. ಸಾಲ ತೆಗೆದುಕೊಂಡು 6 ತಿಂಗಳ ಬಳಿಕ ಇ.ಎಂ.ಐ. ಪ್ರಾರಂಭ ಮಾಡಲಾಗುತ್ತದೆ.
ಎಸ್‌.ಬಿ.ಐ.ನ ಈ ತುರ್ತು ಸಾಲ ಯೋಜನೆ ಅಡಿಯಲ್ಲಿ ಸಾಲ ಪಡೆದವರು, ಸಾಲ ಅನುಮೋದಿಸಿದ ಆರು ತಿಂಗಳ ನಂತರ ಸಮನಾದ ಮಾಸಿಕ ಕಂತುಗಳನ್ನು ಪಾವತಿಸಬೇಕಾಗುತ್ತದೆ. ಅಂದರೆ ನಿಮ್ಮ ಇಎಂಐ ಸಾಲ ಪಡೆದು ಆರು ತಿಂಗಳ ಬಳಿಕ ಶುರುವಾಗಲಿದೆ.

ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಉಂಟಾಗಿರುವ ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿರುವ ಗ್ರಾಹಕರಿಗೆ ಈ ತುರ್ತು ಸಾಲ ಯೋಜನೆಯಿಂದ ಸಹಾಯವಾಗುತ್ತದೆ.

ಎಸ್‌.ಬಿ.ಐ. ನ ತುರ್ತು ಸಾಲ ಯೋಜನೆಯು 10.5 ಪರ್ಸೆಂಟ್ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ ಮತ್ತು ಸಾಲದ ಇ.ಎಂ.ಐ. ಆರು ತಿಂಗಳ ನಂತರ ಪ್ರಾರಂಭವಾಗಲಿದೆ. ಇದು ಇತರ ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಉತ್ತಮವಾಗಿದೆ.
ನೀವು ಸಾಲ ಪಡೆಯಲು ಅರ್ಹರೆಂದು ತಿಳಿಯಲು ಪ್ರಥಮವಾಗಿ ಎಸ್.ಎಂ.ಎಸ್. ಮಾಡಬೇಕು. ನಿಮ್ಮ ಮೊಬೈಲ್‌ನಲ್ಲಿ ‘PAPL’ ಎಂದು ಟೈಪ್‌ ಮಾಡಿ ನಿಮ್ಮ ಎಸ್‌.ಬಿ ಐ. ಅಕೌಂಟ್ ನಂಬರ್‌ನ ಕೊನೆಯ ನಾಲ್ಕು ಸಂಖ್ಯೆಗಳನ್ನು ಟೈಪ್‌ ಮಾಡಿ 567676 ಗೆ ಕಳುಹಿಸುವ ಮೂಲಕ ನೀವು ಈ ಸಾಲ ಯೋಜನೆಯ ಅರ್ಹತೆಯನ್ನು ಪರಿಶೀಲಿಸಬಹುದು ಮಾಡಬೇಕು. ಆನ್‌ಲೈನ್‌ನಲ್ಲಿ ಅಥವಾ ಎಸ್‌.ಬಿ.ಐ. ನ ಯೋನೊ ಆಪ್ ಮೂಲಕ ಅರ್ಜಿ ಸಲ್ಲಿಸುವ ಮೂಲಕ ನೀವು ಈ ತುರ್ತು ಸಾಲ ಯೋಜನೆಯನ್ನು ಪಡೆಯಬಹುದು. ನೀವು ಸಾಲಕ್ಕೆ ಅರ್ಹರಾಗಿದ್ದರೆ ಎಸ್‌ಬಿಐ ನಿಮ್ಮ ಎಸ್‌ಎಂಎಸ್‌ಗೆ ಪ್ರತಿಕ್ರಿಯಿಸುತ್ತದೆ. ಜೊತೆಗೆ ಕೆಲವು ನಿಯಮಗಳು ಕೂಡ ಅನ್ವಯವಾಗಲಿದೆ.

ಅರ್ಜಿ ಸಲ್ಲಿಸುವ ವಿಧಾನ
ಎಸ್‌ಬಿಐ ತುರ್ತು ಸಾಲ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

– ಯೋನೊ ಎಸ್‌ಬಿಐ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ‘ಪೂರ್ವ-ಅನುಮೋದಿತ ಸಾಲ’ ಕ್ಲಿಕ್ ಮಾಡಿ.

– ಅಧಿಕಾರಾವಧಿ ಮತ್ತು ಸಾಲದ ಮೊತ್ತವನ್ನು ಸೆಲೆಕ್ಟ್ ಮಾಡಿ.

– ನಿಮ್ಮ ಖಾತೆಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುವುದು ಮತ್ತು ನೀವು ಅದನ್ನು ಸಲ್ಲಿಸಬೇಕು.

– ಎಸ್‌ಬಿಐ ತುರ್ತು ಸಾಲದ ಮೊತ್ತವನ್ನು ತಕ್ಷಣ ನಿಮ್ಮ ಎಸ್‌ಬಿಐ ಉಳಿತಾಯ ಖಾತೆಗೆ ಜಮಾ ಮಾಡಲಾಗುತ್ತದೆ.

ಈ ಪ್ರಕ್ರಿಯೆಯು ಎಲ್ಲವೂ ಸರಿಯಾಗಿ ನಡೆದರೆ 45 ನಿಮಿಷಗಳಲ್ಲಿ 5 ಲಕ್ಷ ರುಪಾಯಿವರೆಗೆ ಸಾಲವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಎಸ್.ಬಿ. ಐ. ಮೂಲಗಳು ತಿಳಿಸಿವೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here