ವಿಟ್ಲ: ಹಿರಿಯ ಹವ್ಯಾಸಿ ಯಕ್ಷಗಾನ ಭಾಗವತ, ವಿಟ್ಲದ ಸಿಪಿಸಿಆರ್‍ಯ ನಿವೃತ್ತ ಉದ್ಯೋಗಿ ದಿವಾಣ ಗಣಪತಿ ಭಟ್(87) ಮೇ.3 ರಂದು ಮಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿ ನಿಧನರಾದರು.
ಆರು ದಶಕಗಳ ಕಾಲ ಹವ್ಯಾಸಿ ಭಾಗವತರಾಗಿ ಸೇವೆ ಸಲ್ಲಿಸಿದ ಅವರು ಕಿರಿಯ ಕಲಾವಿದರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದ ನಿಸ್ವಾರ್ಥ ಕಲಾಪೋಷಕರು. ‘ಸುದರ್ಶನ ವಿಜಯ’ ಪ್ರಸಂಗವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿ ಪ್ರಯೋಗಿಸಿದ ಹೆಗ್ಗಳಿಕೆ ಅವರದ್ದಾಗಿದೆ. ಕೋಡಪದವು ವೀರಾಂಜನೇಯ ಯಕ್ಷಗಾನ ಕಲಾ ಸಂಘ, ವಿಟ್ಲದ ಗಮಿ ವಿಶ್ವನಾಥ ಶೆಟ್ಟಿ ನೇತೃತ್ವದ ಸದ್ಗುರು ಯಕ್ಷರಂಜಿನಿ ತಂಡದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದರು.
ವಿಟ್ಲ ವ್ಯಾಪ್ತಿಯಲ್ಲಿ ನೂರಾರು ತಾಳಮದ್ದಳೆಗಳನ್ನು ಸಡೆಸಿದ್ದರು. ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಗೌರವ, ವಿಟ್ಲದಲ್ಲಿ ಯಕ್ಷ ಸಿಂಧೂರ ಪ್ರತಿಷ್ಠಾನದ ಸಮ್ಮಾನ ಸಹಿತ ನಾನಾ ಪುರಸ್ಕಾರಗಳನ್ನು ಪಡೆದಿದ್ದರು. ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here