Friday, October 27, 2023

ದ.ಕ. ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ: ಜಿಲ್ಲೆಯಲ್ಲಿ ಹಲವು ವಿನಾಯಿತಿ

Must read

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ನಾಳೆಯಿಂದ ಕೊಂಚ ರಿಲೀಫ್ ನೀಡಲಾಗಿದ್ದು, ಬೆಳಗ್ಗೆ 7 ರಿಂದ ಸಂಜೆ 7 ರ ತನಕ ಅಂಗಡಿ ಮುಗ್ಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಜಿಲ್ಲೆಯ ಒಳಗೆ ಓಡಾಡಲು ಪಾಸ್‌ನ ಅವಶ್ಯಕತೆಯಿಲ್ಲ. ಆದರೆ ಬೇರೆ ಜಿಲ್ಲೆಗಳಿಗೆ ಹೋಗಬೇಕಾದ್ದಲ್ಲಿ ಪಾಸ್‌ ಬೇಕು. ಬಸ್‌ಗಳ ಓಡಾಟಕ್ಕೆ ಅವಕಾಶ ನೀಡಿಲ್ಲ. ಆಟೋ ರಿಕ್ಷಾಗಳು, ಬೈಕ್‌ಗಳ ಸಂಚಾರಕ್ಕೆ ಅವಕಾಶವಿದೆ. ಆಟೋ ರಿಕ್ಷಾದಲ್ಲಿ 1+1 ಹಾಗೂ ಕಾರಿನಲ್ಲಿ 2+2 ಗೆ ಅವಕಾಶ ನೀಡಲಾಗಿದೆ. ಎಲ್ಲಾ ಕೈಗಾರಿಕಾ ಕೇಂದ್ರಗಳು ಕಾರ್ಯ ನಿರ್ವಹಿಸಲು ಅವಕಾಶವಿದೆ ಎಂದರು.

ಹೆಚ್ಚು ಜನ ಒಮ್ಮೆಲೇ ಸೇರುವ ಕಾರಣದಿಂದಾಗಿ ಮಾಲ್‌, ಸೆಲೂನ್‌, ಬಾರ್‌, ರೆಸ್ಟೂರೆಂಟ್‌, ಬ್ಯೂಟಿಪಾರ್ಲರ್‌, ದಂತ ಚಿಕಿತ್ಸಾಲಯಕ್ಕೆ ಅವಕಾಶವಿಲ್ಲ. ಉಳಿದಂತೆ ಎಲ್ಲಾ ಅಂಗಡಿ ಮುಗ್ಗಟ್ಟುಗಳು ತೆರೆಯಲು ಅವಕಾಶ ನೀಡಲಾಗುವುದು ಎಂದರು. ನಾಳೆಯಿಂದ ಎಲ್ಲಾ ವೈನ್‌ ಶಾಪ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿದೆ. ಆದರೆ ಅಲ್ಲಿ ಮದ್ಯ ಪಾರ್ಸೆಲ್ ತರಲು ಮಾತ್ರ ಅವಕಾಶವಿದ್ದು, ಮದ್ಯಪಾನ ಮಾಡಲು ಅವಕಾಶವಿಲ್ಲ. ಬಾರ್‌ ಆಂಡ್‌ ರೆಸ್ಟೂರೆಂಟ್‌ಗಳಿಗೆ ತೆರೆಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

More articles

Latest article