



ಇರಾ : ಕೊರೊನ ಸಂಕಷ್ಟ ಪೀಡಿತ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು, ಪಂಜಾಜೆ, ಕುಕ್ಕಾಜೆ ಬೈಲು, ಪರ್ಲಡ್ಕ, ಪರಪ್ಪು ಸೈಟ್, ದರ್ಖಾಸ್, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ಗ್ರಾಮ ಪಂಚಾಯತ್ ವತಿಯಿಂದ ಆಹಾರ ಕಿಟ್ಟ್ ನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಹಾಗೂ ಪಂಚಾಯತ್ ಸದಸ್ಯರ ತಂಡ ಮನೆ ಮನೆಗೆ ತೆರಳಿ ವಿತರಿಸಿ, ಗ್ರಾಮದಲ್ಲಿ ಆರ್ಥಿಕವಾಗಿ ತೊಂದರೆಯಲ್ಲಿರುವ ಬಹುತೇಕ ಎಲ್ಲಾ ಕುಟುಂಬಗಳಿಗೂ ಗ್ರಾಮ ಪಂಚಾಯತ್ ಹಾಗೂ ದಾನಿಗಳ ಸಹಕಾರದ ಮೂಲಕ ನೆರವನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿಯೂ ಜನರ ಸಂಕಷ್ಟಗಳಿಗೆ ಸ್ಪಂದಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲ ಅಶ್ವತ್ಥಡಿ, ಮೊಯಿದಿನ್ ಕುಂಞಿ, ಎಮ್.ಬಿ.ಉಮ್ಮರ್, ಶೇಖರ್ ಪೂಜಾರಿ, ರಮೇಶ್ ಪೂಜಾರಿ, ಚಂದ್ರಶೇಖರ ಕುಕ್ಕಾಜೆ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶೀಲಾ, ಕಾರ್ಯದರ್ಶಿ ನಳಿನಿ. ಎ.ಕೆ., ಸಿಬ್ಬಂದಿಗಳಾದ ಗುಲಾಬಿ, ರಂಜನ್ ಶೆಟ್ಟಿ, ಗಿರಿಯಪ್ಪ ಹಾಗೂ ಯುವಕ ಮಂಡಲ (ರಿ) ಇರಾ ಸಹಕರಿಸಿದರು.






