


ವಿಟ್ಲ: ಕೊಳ್ನಾಡು ಗ್ರಾಮದಲ್ಲಿ ಅತಂತ್ರರಾಗಿ ಉಳಿದುಕೊಂಡಿರುವ ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಡುವ ವ್ಯವಸ್ಥೆಗೆ ಸಹಕರಿಸುವ ಬಗ್ಗೆ ಬಂಟ್ವಾಳ ಶಾಸಕರು ಭರವಸೆ ನೀಡಿದ್ದಾರೆ.
ವಲಸೆ ಕಾರ್ಮಿಕರನ್ನು ಕಳುಹಿಸಿ ಕೊಡುವ ಸಂದರ್ಭದಲ್ಲಿ ಕೊಳ್ನಾಡು ಹಾಗೂ ಇತರ ಗ್ರಾಮದಲ್ಲಿ ಬಾಕಿ ಉಳಿದಿರುವ ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಿ ಕೊಡುವ ಬಗ್ಗೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಮತ್ತು ಶ್ರೀಘ್ರದಲ್ಲೇ ಅವರಿಗೆ ವ್ಯವಸ್ಥೆ ಮಾಡಲಾಗುವುದೆಂದು ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಶಾಸಕ ರಾಜೇಶ್ ನಾಯ್ಕ್ ಭರವಸೆ ನೀಡಿದ್ದಾರೆ.
ಬಂಟ್ವಾಳದಿಂದ ಈಗಾಗಲೇ ಹೆಚ್ಚಿನ ಜನರನ್ನು ಕಳುಹಿಸಿ ಕೊಡಲಾಗಿದೆ. ಜಿಲ್ಲಾಧಿಕಾರಿಗಳ ವ್ಯವಸ್ಥೆಯಲ್ಲಿ ಇದ್ದ ಸಂಪನ್ಮೂಲಗಳು ಈಗಾಗಲೇ ಉಪಯೋಗಗೊಂಡಿದ್ದು, ಮುಂದಿನ ಸಂಪನ್ಮೂಲಕ್ಕೆ ಕಾಯಬೇಕಿದೆ ಮತ್ತು ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಮಾತ್ರ ಕಳುಹಿಸಿಕೊಡಬೇಕಾದ ನಿಯಮ ವಿರುವುದರಿಂದ ಬದಲಿ ವ್ಯವಸ್ಥೆ ಕಷ್ಟ ಸಾಧ್ಯವಾಗಿದೆಯೆಂದು ತಿಳಿಸಿದ್ದಾರೆ. ಅಲ್ಲಿಯವರೆಗೆ ವಲಸೆ ಕಾರ್ಮಿಕರ ಅಹಾರ-ಸಾಮಗ್ರಿಗಳ ವ್ಯವಸ್ಥೆಯನ್ನು ಮಾಡಲಾಗುವುದೆಂದು ಶಾಸಕರು ಭರವಸೆ ನೀಡಿದ್ದು, ಶಾಸಕರ ಸ್ಪಂದನೆಗೆ ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಕೃತಜ್ಞತೆ ಸಲ್ಲಿಸಿದ್ದಾರೆ.





