



ದ.ಕ.ಜಿಲ್ಲೆಯ ಬಂಟ್ವಾಳದಲ್ಲಿ ದಿನದಿಂದ ದಿನಕ್ಕೆ ಕೊರೊನ ಪಾಸಿಟಿವ್ ಪ್ರಕರಣದ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದರೂ, ಕೂಡಾ ಅನಗತ್ಯ ತಿರುಗಾಟ ನಡೆಸುವವರ ಸಂಖ್ಯೆ ಕಡಿಮೆಯಾಗಿಲ್ಲ, ಪೊಲೀಸರು ಕಾರ್ಯಚರಣೆ ನಡೆಸಿ ವಾಹನಗಳ ವಶಕ್ಕೆ ಪಡೆಯುವ ಕಾರ್ಯಕ್ಕೆ ರೆಸ್ಟ್ ಕೂಡಾ ಸಿಕ್ಕಲ್ಲ.
ಕೊರೊನಾ ಪಾಸಿಟಿವ್ ಹೆಚ್ಚಾಗುತ್ತಿದ್ದರೂ ಕೂಡ ಬಂಟ್ವಾಳದ ಜನತೆಗೆ ಬುದ್ಧಿ ಬರಲಿಲ್ಲ.
ಅನಗತ್ಯವಾಗಿ ತಿರುಗಾಟ ನಡೆಸುವುದರ ಜೊತೆಗೆ ಪೊಲೀಸರ ನೆಮ್ಮದಿಗೂ ಕಗ್ಗಂಟಾಗಿದ್ದಾರೆ.
ಮನೆಯಲ್ಲಿಯೇ ಇರಿ, ಸೇಫ್ ಅಗಿರಿ ಎಂದು ಎಷ್ಟು ಹೇಳಿದರೂ ಅನಾವಶ್ಯಕ ತಿರುಗಾಟ ನಡೆಸುವುದು ಹೆಚ್ಚಾಗುತ್ತಲೆ ಇದೆ.
ಹಾಗಾಗಿ ಇಂತವರ ನಿಯಂತ್ರಣಕ್ಕೆ ಬಂಟ್ವಾಳ ಡಿ.ವೈ.ಎಸ್. ಪಿ.ವೆಲಂಟೈನ್ ನಿರ್ದೇಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ತಂಡ ಇಂದು ಕಟ್ಟುನಿಟ್ಟಾಗಿ ಕ್ರಮ ಕೈಗೊಂಡಿದೆ.
ಈ ಹಿಂದೆಗಿಂತಲೂ ಹೆಚ್ಚು ಕಠಿಣವಾಗಿ ತಪಾಸಣೆ ಮಾಡಿ ವಾಹನಗಳ ಸಂಚಾರಕ್ಕೆ ತಡೆ ನೀಡಿದ್ದಾರೆ.
ಬಂಟ್ವಾಳ : ಸರಕಾರದ ಲಾಕ್ಡೌನ್ ಆದೇಶದ ನಡುವೆಯೂ ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದವರಿಗೆ ಶನಿವಾರ ಪೊಲೀಸರು ಏಕಕಾಲದಲ್ಲಿ ಮೂರು ಕಡೆ ಕಾರ್ಯಾಚರಣೆ ನಡೆಸಿ ಬಿಸಿ ಮುಟ್ಟಿಸಿದ್ದಾರೆ.
ಬಿ.ಸಿ.ರೋಡಿನ ನಾರಾಯಣ ಗುರು ವೃತ್ತದಲ್ಲಿ ಬಂಟ್ವಾಳ ನಗರ ಪಿಎಸ್ಐ ಅವಿನಾಶ್ ಅವರ ನೇತೃತ್ವದಲ್ಲಿ, ಉಳಿದಂತೆ ಬಿ.ಸಿ.ರೋಡು ಜಂಕ್ಷನ್ನಲ್ಲಿ ಮಂಗಳೂರು ಕಡೆಯಿಂದ ಆಗಮಿಸಿದ ವಾಹನಗಳನ್ನು ಅಪರಾಧ ವಿಭಾಗದ ಪಿಎಸ್ಐ ಸಂತೋಷ್ ಅವರ ನೇತೃತ್ವದಲ್ಲಿ ಹಾಗೂ ಮೆಲ್ಕಾರ್ನಲ್ಲಿ ಸಂಚಾರಿ ಠಾಣಾ ಪಿಎಸ್ಐಗಳಾದ ರಾಜೇಶ್ ಕೆ.ವಿ. ಹಾಗೂ ರಾಮ ನಾಯ್ಕ್ ಅವರು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಪ್ರತಿ ವಾಹನಗಳನ್ನು ತಡೆದು ವಿಚಾರಣೆ ನಡೆಸಿದ ಪೊಲೀಸರು ಅಗತ್ಯ ಸಾಗಾಟದ ವಾಹನಗಳಿಗೆ ಮಾತ್ರ ಅವಕಾಶ ನೀಡಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ಒಬ್ಬರೇ ಓಡಾಟ ನಡೆಸಬೇಕು, ಆಟೋ, ಖಾಸಗಿ ವಾಹನಗಳಲ್ಲಿ ಹಿಂಬದಿ ಒಬ್ಬರಿಗೆ ಮಾತ್ರ ಎಂಬ ಆದೇಶವಿದ್ದರೂ ಜನರು ಅದನ್ನು ಉಲ್ಲಂಘನೆ ಮಾಡಿ ತಿರುಗಾಡುತ್ತಿದ್ದರು.
ಶನಿವಾರ ಬೆಳ್ಳಂ ಬೆಳಗ್ಗೆಯೇ ಕಾರ್ಯಾಚರಣೆ ನಡೆಸಿದ ಪೊಲೀಸರು ಅಗತ್ಯ ಸಾಮಾಗ್ರಿಗಳ ಖರೀದಿ ನೆಪದಲ್ಲಿ ತಿರುಗಾಡುತ್ತಿದ್ದರಿಗೆ ಕಾನೂನಿನ ಬಿಸಿ ಮುಟ್ಟಿಸಿದ್ದಾರೆ. ಬಿ.ಸಿ.ರೋಡು ನಾರಾಯಣ ಗುರು ವೃತ್ತದ ಬಳಿ ಹೆಚ್ಚಿನ ವಾಹನಗಳನ್ನು ವಿಚಾರಣೆ ನಡೆಸಲಾಗಿದೆ.





