ಬಂಟ್ವಾಳ: ಶಾಸಕರು ಯಾವ ರೀತಿ ಇರಬೇಕು ಎಂಬುದಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸಾಕ್ಷಿಯಾದರು.
ಇಡೀ ಜಿಲ್ಲೆಯ ಜನರು ಒಮ್ಮೆ ಬಂಟ್ವಾಳ ಶಾಸಕರ ಮಾತಿಗೆ ಮೂಕವಿಸ್ಮಿತರಾಗಿ ಸ್ತಬ್ಧರಾಗಿದ್ದರೆ. ಹಿಂದೂ ಸಂಸ್ಕ್ರತಿಯ ಭವ್ಯ ಪರಂಪರೆಯ ರೀತಿಯಲ್ಲಿ ಮಹಿಳೆಯ ಶವ ಸಂಸ್ಕಾರಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು, ಸಮಸ್ಯೆಯಾದರೆ ನನ್ನ ಒಡ್ಡೂರು ಪಾರ್ಮ್ ಹೌಸ್ ನ ಜಮೀನಿನಲ್ಲಿ ಶವಸಂಸ್ಕಾರ ಮಾಡಿ ಎಂಬ ಮಾತಿಗೆ ಇಡೀ ಅಧಿಕಾರಿ ವರ್ಗ ತಲೆಬಾಗಬೇಕಾಯಿತು. ಇದು ನಿನ್ನೆ ರಾತ್ರಿ ನಡೆದ ಘಟನೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಎರಡನೇ ಬಲಿಯಾಗಿದೆ. ಎ.19 ರಂದು ಮೃತಪಟ್ಟ ಮಹಿಳೆಯ ಸಂಬಂಧಿ ಮಹಿಳೆಯೋರ್ವರು ನಿನ್ನೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಕಳೆದ ಆದಿತ್ಯವಾರ ಮೃತ ಮಹಿಳೆಯ ಶವಸಂಸ್ಕಾರವನ್ನು ಮಂಗಳೂರಿನಲ್ಲಿ ನಡೆಸಿದಾಗ ಸ್ಥಳೀಯ ಜನರು ಪ್ರತಿಭಟಿಸಿದ್ದು, ನಿನ್ನೆ ಮೃತ ಪಟ್ಟ ಮಹಿಳೆಯ ಶವ ಸಂಸ್ಕಾರವು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿತು. ಮಂಗಳೂರಿನ ಎರಡು ಮೂರು ಕಡೆಗಳಲ್ಲಿ ಇದಕ್ಕೆ ವಿರೋಧ ವ್ಯಕ್ತವಾದಾಗ ಆಡಳಿತ ಬಂಟ್ವಾಳದಲ್ಲಿ ಈ ಕಾರ್ಯಕ್ಕೆ ಮುಂದಾಯಿತು. ಅಲ್ಲಿಯೂ ಇದಕ್ಕೆ ವಿರೋಧ ಉಂಟಾದಾಗ ರಾತ್ರಿ ಸುಮಾರು 11 ಗಂಟೆಯ ಸಮಯ ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ರವರನ್ನು ಸಂಪರ್ಕಿಸಿತು. ತಕ್ಷಣವೇ ಮಾನವೀಯತೆ ಮೆರೆದ ಶಾಸಕರು ತನ್ನ ಪತ್ನಿ ಪುತ್ರರಲ್ಲಿ ಮಾತುಕತೆ ನಡೆಸಿ ಸಂಸದ ನಳಿನ್ ಕುಮಾರ್ ಕಟೀಲ್ ರವರಿಗೆ ತಿಳಿಸಿದ ಬಳಿಕ ಶವಸಂಸ್ಕಾರಕ್ಕೆ ಎಲ್ಲಿಯೂ ಅವಕಾಶ ಸಿಗದಲ್ಲಿ ತನ್ನ ಸ್ವಂತ ಸ್ಥಳದಲ್ಲಿ ನಾನು ಅವಕಾಶ ನೀಡತ್ತೇನೆ ಇಲ್ಲಿ ತಂದು ಅಂತ್ಯ ಸಂಸ್ಕಾರ ಮಾಡಬಹುದು. ಯಾಕೆಂದರೆ ಮೃತ ಮಹಿಳೆ ನನ್ನ ಕ್ಷೇತ್ರದವರು. ಶವಸಂಸ್ಕಾರಕ್ಕೂ ಅವಕಾಶ ನೀಡದ ದಯನೀಯ ಸ್ಥಿತಿ ನನ್ನ ಕ್ಷೇತ್ರದ ಮಹಿಳೆಗೆ ಬರಬಾರದು ಎಂದರು. ಶಾಸಕರ ಮಾತಿಗೆ ಜಿಲ್ಲಾಡಳಿತ ದಿಗ್ಬ್ರಮೆಗೊಂಡಿತು. ಶಾಸಕರು ಬೇರೆ ಸ್ಥಳ ಸೂಚಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಧಿಕಾರಿಗಳಿಗೆ ಶಾಸಕರ ಈ ಮಾತಿನಿಂದ ಆತ್ಮ ವಿಶ್ವಾಸ ಹೆಚ್ಚಿತು. ಕೊನೆಗೂ ಪ್ರತ್ಯೇಕ ಸ್ಥಳದಲ್ಲಿ ಶವಸಂಸ್ಕಾರ ನಡೆಸಲಾಯಿತು.

ಇದು ನಿಜವಾದ ಮಾನವೀಯ ಮೌಲ್ಯಗಳಿರುವ ಗುಣ ಎಂಬ ಮಾತುಗಳು ಜಿಲ್ಲೆಯ ಜನರ ಬಾಯಲ್ಲಿ ಕೇಳಿ ಬರುತ್ತಿದೆ.
ಆರಂಭದಲ್ಲಿ ಶಾಸಕರು ಬಂಟ್ವಾಳ ಕ್ಷೇತ್ರದ ಜನರಿಗೆ ಒಂದು ಮಾತನ್ನು ಹೇಳಿದ್ದರು. ರಾಜ ಧರ್ಮದ ಪಾಲನೆ ಮಾಡುತ್ತೇನೆ. ಅದೇ ರೀತಿಯಲ್ಲಿ ಮಹಿಳೆಯ ಶವಸಂಸ್ಕಾರದ ವೇಳೆ ಜಿಲ್ಲಾಡಳಿತಕ್ಕೆ ಸಾಥ್ ನೀಡಿ, ಸಹಕಾರ ನೀಡಿದ್ದಲ್ಲದೆ, ಸ್ವಂತ ಜಾಗದಲ್ಲಿ ಶವಸಂಸ್ಕಾರ ಕ್ಕೆ ಅವಕಾಶ ನೀಡುವ ಭರವಸೆಯ ಮಾತು ಇತರರಿಗೆ ಮಾದರಿಯಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here