ಮಹಾರಾಷ್ಟ್ರ: ಸಾಧು ಸಂತರ ನಾಡು ಹಿಂದೂ ಸಾಮ್ರಾಜ್ಯ ಚಕ್ರವರ್ತಿ  ಶಿವಾಜಿ ಮಹಾರಾಜರ ಪುಣ್ಯಭೂಮಿ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ಸಾಧುಗಳು ಹಾಗೂ ಅವರ ವಾಹನ ಚಾಲಕರನ್ನು ನಿರ್ದಾಕ್ಷಿಣ್ಯವಾಗಿ ಹಿಂಸಿಸಿದ ಹತ್ಯೆ ಮಾಡಿರುವ ಘಟನೆಯನ್ನು  ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಎಲ್ಲ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಮುಂದೆಂದೂ ನಮ್ಮ ದೇಶದಲ್ಲಿ ಈ ರೀತಿಯ ಕೃತ್ಯಗಳು ನಡೆಯದಂತೆ ಸರಕಾರ  ಸೂಕ್ತ ವ್ಯವಸ್ಥೆ ಮಾಡಬೇಕೆಂದು ಎಂದು ಮಹಾರಾಷ್ಟ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಇದೊಂದು ಮನುಕುಲದ  ಅತಿ ದೊಡ್ಡ ಕ್ರೌರ್ಯ ಎಂದವರು ಹೇಳಿದ್ದಲ್ಲದೆ, ಪುಣ್ಯ ಭೂಮಿ ಭಾರತದಲ್ಲಿ ಇಂತಹ ಕುಕೃತ್ಯಗಳು ನಡೆಯಲೇ ಬಾರದು ಎಂದು ಆಗ್ರಹಿಸಿದ್ದಾರೆ. ದೇಶದ ಸತ್ಪ್ರಜೆಗಳು, ನಾಗರೀಕರ ಸಮಾಜ, ಧಾರ್ಮಿಕ ಭಾವನೆಗಳುಳ್ಳ ಸಮಾನ ಮನಸ್ಕರು, ಸಾಧು ಸಂತರು ಒಗ್ಗಟ್ಟಾಗಿ ಇದರ ವಿರುದ್ಧ ಧ್ವನಿಯಾಗುವ ಅವಶ್ಯಕತೆಯಿದೆ ದೇಶದ ಸಾಧುಸಂತರಿಗೆ ರಕ್ಷಣೆಯಿಲ್ಲ ಎಂದಿದ್ದಾರೆ. ಇಲ್ಲದಿದ್ದಲ್ಲಿ ಧರ್ಮರಕ್ಷಣೆಯೂ ಅಸಾಧ್ಯ ಹಿಂದೂ ಧರ್ಮದ ರಕ್ಷಣೆಗಾಗಿ ಪಣತೊಟ್ಟಿರುವ ಶಿವಾಜಿ ಮಹಾರಾಜನ  ಮರಾಠಿ ಮಣ್ಣಿನಲ್ಲಿ ಸಾಧುಗಳಿಗೆ ರಕ್ಷಣೆ ಇಲ್ಲದಂತಾಗಿದೆ ಸಮಸ್ತ ಬಂಧುಗಳೇ ಕ್ರೂರ ಕೃತ್ಯವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಭಟಿಸುವುದು ಅಗತ್ಯವಿದೆ ಎಂದು ತಿಳಿಸಿರುವರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here