ಬಂಟ್ವಾಳ: ದಕ್ಷಿಣ ಕನ್ನಡದಲ್ಲಿ ಕೊರೋನ ಸೋಂಕು ಇದ್ದರೂ, ಸಾವು ಆಗಿರಲಿಲ್ಲ.‌ಪುರಸಭಾ ವ್ಯಾಪ್ತಿಯಲ್ಲಿ ಕೊರೋನಾ ಸಾವು ಸಂಭವಿಸಿದೆ.ಇದು ವಿಷಾದನೀಯ ವಿಚಾರ ಕೊರೋನಾ ಸೋಂಕಿನ ಮಾಹಿತಿ ಇರಲಿಲ್ಲ ಎಂಬುದು ತಿಳಿವಳಿಕೆ.‌ ಸೋಂಕು ಸಮುದಾಯಕ್ಕೆ ಹರಡುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು. ಅಪಾಯದ ಪರಿಸ್ಥಿತಿ ಎದುರಾಗಿದೆ. ಮಾಜಿ ಶಾಸಕನಾಗಿ, ಮಂತ್ರಿಯಾಗಿ ಕ್ಷೇತ್ರದಲ್ಲಿ ಅಗಿರುವ ಸಾವಿಗೆ ವಿಷಾಧ ನೋವು ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಲಾಕ್ ಡೌನ್ ನಿಂದ ಮಾತ್ರ ಇದರ ‌ನಿಯಂತ್ರಣ ಸಾಧ್ಯವಿಲ್ಲ. ಸಮುದಾಯದ ತಪಾಸಣೆ ಆಗಬೇಕಿದೆ. ತಪಾಸಣೆ ಮಾಡುವ ಕಿಟ್ ಗಳ‌ ಬಗ್ಗೆ ಸಂಶಯ ಬಂದಿರುವುದು ಆತಂ‌ಕಕಾರಿ ವಿಚಾರ. ಇದರ‌ ಬಗ್ಗೆ ಗಮನ ಹರಿಸಬೇಕಿದೆ. ಸಮುದಾಯದ ರ್‍ಯಾಪಿಡ್ ಟೆಸ್ಟಿಂಗ್ ಆಗಬೇಕು ಎಂದು ಅವರು ಒತ್ತಾಯಿಸಿದರು. ಸಮುದಾಯಕ್ಕೆ ಹರಡದಂತೆ ಸರ್ಕಾರ, ಇಲಾಖೆ ಮುತುವರ್ಜಿ ವಹಿಸಬೇಲು. ದಿನಗೂಲಿ ಕಾರ್ಮಿಕರು, ಕಾರ್ಮಿಕರು ಸೋತಿದ್ದಾರೆ. ಸರ್ಕಾರ ನೀಡಬೇಕಿದ್ದ ಗೋಧಿ ಅಕ್ಕಿ, ಇನ್ನೂ ಕೆಲವೆಡೆಗಳಲ್ಲಿ ತಲುಪಿಲ್ಲ. ಲಾಕ್ ಡೌನ್ ಎರಡನೇ ಹಂತದಲ್ಲಿದೆ. ಇಂತಹ ಸನ್ನಿವೇಶದಲ್ಲಿ ಸರ್ಕಾರ ಕೂಡಲೇ ಗಮನಹರಿಸಬೇಕು. ಅದರ ಬಗ್ಗೆ ಸರ್ಕಾರ ಗಂಭೀರ ಗಮನ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಅಂತರವನ್ನು ಮುಂದಿನ ದಿನಗಳಲ್ಲಿಯೂ ಕಾಪಾಡುವಂತಹ ಕೆಲಸ ಆಗಬೇಕಿದೆ. ನೆರೆ ರಾಜ್ಯದಲ್ಲಿ ಕೂಡ ಇಂತಹ ವ್ಯವಸ್ಥೆ ಆಗಬೇಕು. ಪಂಚಾಯತ್ ಅನ್ನು ಕೇಂದ್ರವಾಗಿಸಿಕೊಂಡು, ತಾಲೂಕಲ್ಲಿ ಒಂದು ಗಂಜಿ ಕೇಂದ್ರ, ಪಂಚಾಯತ್ ನಲ್ಲೊಂದು ಗಂಜಿ ‌ಕೇಂದ್ರ ಮಾಡುವ ಕಾರ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‌ಆಗಬೇಕು. ಕಟ್ಟಡ ಕಾರ್ಮಿಕರು, ದಿನಗೂಲಿ ಕಾರ್ಮಿಕರು, ವಿದೇಶದಲ್ಲಿರುವವರು ಹೆಚ್ಚು ಜನ ಇರುವ ಜಿಲ್ಲೆ ಇದಾಗಿದೆ ಎಂದರು. 2000 ರೂ. ನೋಂದಣಿಯಾದ ಕಟ್ಟಡ ಕಾರ್ಮಿಕರಿಗೆ ನೀಡುವ ಬಗ್ಗೆ ಸರ್ಕಾರ ಹೇಳಿದೆ. ಆದರೆ ಇದಕ್ಕೆ 2 ವರ್ಷ ಅವಧಿಯ ಷರತ್ತು ವಿಧಿಸಿದೆ. ‌ಜಿಲ್ಲೆಯ ಮಟ್ಟಿಗೆ ಈ ಷರತ್ತು ವಾಪಾಸು ಪಡೆದುಕೊಳ್ಳುವಂತೆ ಆಗಬೇಕು ಎಂದರು. ಬಂಟ್ವಾಳ ನಗರದ ಸೀಲ್ ಡೌನ್ ವ್ಯಾಪ್ತಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಹಾರವನ್ನು ಸಾಕಷ್ಟು ಸುತ್ತಮುತ್ತಲಿನವರಿಗೆ ಅವಕಾಶ ಆಗುವಂತ ರೀತಿಯಲ್ಲಿ ಮಾಡಲಿ ಎಂದು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here