


ಕಲ್ಲಡ್ಕ: ವಿಶ್ವವೇ ಕೊರೋನ ವೈರಸ್ ನ ಹಾವಳಿಯಿಂದ ತತ್ತರಿಸಿರುವ ಈ ಸಮಯದಲ್ಲಿ, ನಮ್ಮ ದೇಶದಲ್ಲಿ ಈ ವೈರಸ್ ನಿಯಂತ್ರಣಕ್ಕೆ ನಮ್ಮ ಪ್ರಧಾನ ಸೇವಕ ನರೇಂದ್ರ ಮೋದಿಯ ಕರೆಯಂತೆ 2ಹಂತದಲ್ಲಿ ಲಾಕ್ ಡೌನ್ ಹೇರಿ ಈ ವೈರಸ್ ನ ಹಾವಳಿಯಿಂದ ದೇಶದ ಜನರನ್ನು ರಕ್ಷಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಲಾಕ್ ಡೌನ್ನಿಂದ ಜನರಿಗೆ ಉದ್ಯೋಗಕ್ಕೆ, ದಿನನಿತ್ಯದ ಆಹಾರಕ್ಕೂ ಸಮಸ್ಯೆಯಾಗಿದೆ. ಇದನ್ನು ಮನಗಂಡ ಸಂಘ ತನ್ನ ಸದಸ್ಯರಿಗೆ ಕಳೆದ ವಾರ್ಷಿಕ ವರ್ಷದಲ್ಲಿ ಸಂಘಕ್ಕೆ ಹಾಲು ಹಾಕಿ ಪ್ರೋತ್ಸಾಹಿಸಿದ ತನ್ನ 201 ಸದಸ್ಯರಿಗೆ ಪ್ರತಿ ಲೀಟರ್ ಹಾಲಿಗೆ 0.75 ಪೈಸೆಯಂತೆ ಒಟ್ಟು 2,57,958 ರೂಪಾಯಿಯನ್ನು ಹಂಚಿಕೆ ಮಾಡಿ, 1000ಕ್ಕಿಂತ ಹೆಚ್ಚು ಪ್ರೋತ್ಸಾಹ ಧನ ಪಡೆದ ಸದಸ್ಯರಿಗೆ 25 ಕೆಜಿ ಅಕ್ಕಿ ಮತ್ತು ಉಳಿದ ಸದಸ್ಯರಿಗೆ 10ಅಕ್ಕಿ ವಿತರಿಸಿ ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘ ತನ್ನ ಸದಸ್ಯರಿಗೆ ಬೆಂಬಲ ನೀಡಿ ಸಮಾಜಕ್ಕೆ ಮಾದರಿಯಾಗಿದೆ. ಹಾಗೆಯೇ ಮುಖ್ಯಮಂತ್ರಿ ಪರಿಹಾರ ನಿಧಿಗೆ 5000ರುಪಾಯಿಯನ್ನು ಒಕ್ಕೂಟತದ ಮೂಲಕ ನೀಡಲಾಯಿತು.
ಸಂಘದ ಕಛೇರಿಯಲ್ಲಿ ಜರಗಿದ ಸರಳ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಪದ್ಮನಾಭ ಕೊಟ್ಟಾರಿ ಅಕ್ಕಿ ವಿತರಿಸಿದರು. ಪ್ರೋತ್ಸಾಹಧನವನ್ನು ಸದಸ್ಯರ ಖಾತೆಗೆ ಜಮಾಯಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ಎಮ್.ಫ್ ನಿರ್ದೇಶಕ ಸುಧಾಕರ್ ರೈ ಬೋಳಂತೂರು, ಕೆ.ಎಮ್.ಫ್ ಉಪ ವ್ಯವಸ್ಥಾಪಕ ಪ್ರಭಾಕರ್., ವಿಸ್ತರಣಾಧಿಕಾರಿಗಳಾದ ದೇವರಾಜ್ ಮತ್ತು ಜಗಧೀಶ್ ಉಪಸ್ಥಿತರಿದ್ದರು.





