ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ವೃದ್ದೆಯೋರ್ವರು ಕೊರೊನಾಕ್ಕೆ ಮೃತ ಪಟ್ಟಿದ್ದಾರೆ. ಆ ಮೂಲಕ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಕೊರೊನಾಕ್ಕೆ ಬಲಿಯಾದ ಎರಡನೇ ಮಹಿಳೆ.

ಒಂದೇ ಮನೆಯ ಅತ್ತೆ ಸೊಸೆ ಇರ್ವರು ಕೊರೊನಾಕ್ಕೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಒಂದೇ ಮನೆಯ ಎರಡು ಮಂದಿ ಮೃತರಾಗಿರುವುದು ಪ್ರಥಮ ಪ್ರಕರಣವಾಗಿದೆ.

ಬೆಳಿಗ್ಗೆ ಇವರಿಗೆ ಕೊರೊನ ಪಾಸಿಟಿವ್ ಎಂದು ದೃಡವಾಗಿತ್ತು. ಬಳಿಕ ಸಂಜೆ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕೊರೊನಾದಿಂದ ಮತ್ತೊಂದು ಸಾವು ಸಂಭವಿಸುವ ಮೂಲಕ ಎರಡು ಸಾವು ಅಗಿದೆ. 78 ವರ್ಷದ ವೃದ್ದೆಯಲ್ಲಿ ಕೊರೋನ ಸೋಂಕು ಪತ್ತೆಯಾಗಿತ್ತು.

P390 ಸಂಪರ್ಕದಿಂದ ವೃದ್ದೆಗೆ ಹರಡಿರುವ ಕೊರೋನ ಎಂದು ಜಿಲ್ಲಾಡಳಿತ ರಿಪೋರ್ಟ್ ನೀಡಿತ್ತು. ಬಂಟ್ವಾಳ ಒಂದೇ ಜಾಗದಲ್ಲಿ ಮೂರನೇ ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ ಎರಡು ಸಾವು ಕಂಡಿದೆ. ಬಂಟ್ವಾಳ ಒಂದೇ ಪ್ರದೇಶದ ಕೊರೊನಾ ಪಾಸಿಟಿವ್ ಪ್ರಕರಣದಲ್ಲಿ ಓರ್ವ ಮಹಿಳೆ ಸಾವು, ಇನ್ನಿಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ.

ಮೃತ ಮಹಿಳೆಯಿಂದ ಹರಡಿದ ಕೊರೋನ ಸೋಂಕು ಇದಾಗಿದ್ದು, ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಇಂದು ಪಾಸಿಟಿವ್ ರಿಪೋರ್ಟ್ ಬಂದಿರುವ ಮಹಿಳೆ ಕಳೆದ ಒಂದು ತಿಂಗಳಿನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ       ಪಾರ್ಶ್ವ ವಾಯು ಕಾಯಿಲೆಗೆಂದು ಚಿಕಿತ್ಸೆ ಪಡೆಯುತ್ತಿದ್ದು, ತೀವ್ರ ನಿಗಾ ಘಟಕದಲ್ಲಿದ್ದರು.
ಮನೆಯ ಮಹಿಳೆ ಮೃತಪಟ್ಟ ಹಿನ್ನೆಲೆ ಇವರ ಗಂಟಲು ದ್ರವ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಇಂದು ಅವರ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿದ್ದು, ಪಾಸಿಟಿವ್ ಎಂದು ಹೇಳಲಾಗಿತ್ತು. ಆದರೆ ರಾತ್ರಿ ವೇಳೆ ಇವರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here