


ಮುಂಬಯಿ: ಮಹಾಮಾರಿ ಕೊರೋನಾ ಸಾಂಕ್ರಾಂಮಿಕದ ವರದಿ ಮಾಡಲು ಹೋದ 53 ಪತ್ರಕರ್ತರಿಗೆ ಕೊರೋನಾ ಪೋಸಿಟಿವ್ ಆಗಿದೆ ಎಂದು ತಿಳಿದು ಬಂದಿದೆ.
ಪತ್ರಕರ್ತರುಗಳಿಗಾಗಿಯೇ ಏರ್ಪಡಿಸಿದ್ದ ವಿಶೇಷ ಕೋವಿಡ್ 19 ತಪಾಸಣೆಗಳ ಪರೀಕ್ಷಾ ವರದಿಗಳು ಬಂದಿದ್ದು ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ ಹಾಗೂ ವೆಭ್ ಮಾಧ್ಯಮದ ವರದಿಗಾರರು ಮತ್ತು ಛಾಯಾಗ್ರಾಹಕರು ಸೇರಿ 53 ಮಂದಿ ಪತ್ರಕರ್ತರಿಗೆ ಕೊರೋನಾ ಪೋಸಿಟಿವ್ ಆಗಿದೆ. ಇವರಲ್ಲಿ ಹೆಚ್ಚಿನವರು ಕಸ್ತೂರ್ ಬಾ ಆಸ್ಫತ್ರೆ ಹಾಗೂ ಧಾರಾವಿ ಯಲ್ಲಿಂದ ವರದಿ ಮಾಡುತ್ತಿದ್ದರು. ಮಹಿಳಾ ವರದಿಗಾರರೊಬ್ಬರೂ ಇದರಲ್ಲಿ ಸೇರಿರಿವರು ಎಂದು ತಿಳಿದು ಬಂದಿದೆ.
ಸೋಂಕಿನ ಲಕ್ಷಣವನ್ನಾಧರಿಸಿ 174 ಮಾಧ್ಯಮ ಸಿಬ್ಬಂಧಿಗಳನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಟಿವಿ ಪತ್ರಕರ್ತರು ಮತ್ತು ಮಂತ್ರಾಲಯ ಹಾಗೂ ಶಾಸನಸಭೆ ವರದಿಗಾರದ ಒಕ್ಕೂಟದ ಮನವಿ ಮೇರೆಗೆ ಪ್ರತ್ಯೋಕ ಆರೋಗ್ಯ ಶಿಭಿರವನ್ನು ಆಯೋಜಿಸಲಾಗಿದೆ ಎಂದು ಕನ್ನಡಿಗ ಮುಂಬಯಿ ಪ್ರಸ್ ಕ್ಲಬ್ ನ ಜಯ ಪುಜಾರಿ ತಿಳಿಸಿದ್ದಾರೆ.
ಹೆಚ್ಚಾಗಿ ಸಾರ್ವಜನಿಕ ಸ್ಥಳಗಳಿಗೆ ಹೋಗಿ ಕರ್ತವ್ಯ ನಿರ್ವಹಿಸಬೇಕಾದ ಮಾಧ್ಯಮದವರು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ನ್ನು ಉಪಯೋಗಿಸುದನ್ನು ಕಡ್ಡಾಯಗೊಳಿಸಲಾಗಿದೆ.






