ಕಲ್ಲಡ್ಕ: ಕೋವಿಡ್ 19 ವೈರಾಣು ಹರಡದಂತೆ ಸರಕಾರ ಲಾಕ್ ಡೌನ್ ಮಾಡಿದ್ದು, ಇದರಿಂದ ಹಾಲು ಉತ್ಪಾದಕರಿಗೆ ಆರ್ಥಿಕ  ಸಂಕಷ್ಟ ಆಗಿರುವ ಹಿನ್ನೆಲೆಯಲ್ಲಿ ವೀರಕಂಬ ಹಾಲು ಉತ್ಪಾದಕರ ಸಹಕಾರಿ ಸಂಘವು ಸಂಘಕ್ಕೆ 2019 -20ನೇ ಸಾಲಿನಲ್ಲಿ ಸಂಘಕ್ಕೆ ಹಾಲು ಹಾಕಿದ ಪ್ರತೀ ಸದಸ್ಯರಿಗೆ ಪ್ರತಿ ಲೀಟರ್ ಮೇಲೆ 60 ಪೈಸೆಯಂತೆ ಒಟ್ಟು 1,50,000 ರೂ.ಪ್ರೊತ್ಸಾಹಧನ  ಘೋಷಿಸಿದ್ದು, ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಸಿದ ಅಹಮದ್ ಮುಸ್ತಾಫ ಹಾಗೂ ಸಂಘದ ಸಿಬ್ಬಂದಿಗಳಿಗೆ ಸಾಂಕೇತಿಕವಾಗಿ ಚೆಕ್ಕನ್ನು ನೀಡಲಾಯಿತು.

ಉಳಿದ ಸದಸ್ಯರ ಮೊತ್ತವನ್ನು ಸದಸ್ಯರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ದಿಲೀಪ್ ಕುಮಾರ್, ನಿರ್ದೇಶಕರುಗಳಾದ ಅಶೋಕ ಕುಮಾರ್ ತೆಕ್ಕಿಪಾಪು, ಜಗನ್ನಾಥ ಆಳ್ವಮೈರ, ಪದ್ಮನಾಭ ಬಂಗೇರ ಮಜಿ, ಕಾರ್ಯದರ್ಶಿ ಹರೀಶ್ ಬಂಗೇರ, ಸಿಬ್ಬಂದಿ ಶಶಿಕಲಾ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here