ಬಂಟ್ವಾಳ: ಕರ್ತದಲ್ಲಿರುವ ಅಧಿಕಾರಿಕಾರಿಗಳ ಕರ್ತವ್ಯ ಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿರುವ. ಆರೋಪಿ ಗಳ ಶೀಘ್ರವಾಗಿ ಪತ್ತೆಹಚ್ಚಿ ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಮೀಪ್ರಸಾದ್ ಅವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸೂಚಿಸಿದ್ದಾರೆ.
ಇಂದು ಮಧ್ಯಾಹ್ನ ಕರ್ತವ್ಯ ದಲ್ಲಿದ್ದ ಫ್ಲೈಯಿಂಗ್ ಸ್ಕ್ವಾಡ್ ಮಹಿಳಾ ಆಧಿಕಾರಿ ಇರುವ ತಂಡದ ಮೇಲೆ ಪುರಸಭಾ ವ್ಯಾಪ್ತಿಯ ಬಾರೆಕಾಡು ಎಂಬಲ್ಲಿ ಸ್ಥಳೀಯ ತಂಡದಿಂದ ದಾಳಿ ನಡೆದಿತ್ತು. ಈ ಬಗ್ಗೆ ಪುರಸಭಾ ಮಹಿಳಾ ಅಧಿಕಾರಿಯೋರ್ವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋವಿಡ್ 19 ಕರ್ತವ್ಯ ದಲ್ಲಿರುವ ಯಾವುದೇ ಅಧಿಕಾರಿಗಳ ಕರ್ತವ್ಯ ಕ್ಕೆ ಅಡ್ಡಿಪಡಿಸಿದರೆ ಕಠಿಣ ಕಾನೂನು ಕ್ರಮಜರಗಿಸುವಂತೆ ಶಾಸಕರು ಪೋಲೀಸರಿಗೆ ಸೂಚಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here