ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸ್ ಬ್ಯಾರಿಕೇಟ್ ಕಿತ್ತು ಹಾಕಿ ಧ್ವಂಸ ಮಾಡಿದ ಕಿಡಿಗೇಡಿಗಳು -ನಾವು ಕ್ವಾರಂಟೈನ್ ಒಳ ಪಡಲ್

ಬೆಂಗಳೂರು: ಕೊರೊನಾ ವಾರಿಯರ್ಸ್ ವಿರುದ್ಧ ಪಾದರಾಯನ ಪುರ ನಿವಾಸಿಗಳ ಗಲಾಟೆ ಶುರು ಮಾಡಿದ್ದಾರೆ. ಹೊಂ ಕ್ವಾರಂಟೈನ್ ನಲ್ಲಿರಬೇಕಾದವರನ್ನ ಪತ್ತೆ ಹಚ್ಚಿದ್ದ ಅಧಿಕಾರಿಗಳು ಪಾದರಾಯನಪುರದಲ್ಲಿ 58 ಜನರ ಸೊಂಕಿತ ವ್ಯಕ್ತಿಯ ಸಂಪರ್ಕ ಇತ್ತು. 58 ಜನರನ್ನ ಹೊಂ ಚೆಕಪ್ ಗೆ ಪಡೆಯಲು ತೆರಳಿದ್ದ ಬಿಬಿಎಂಪಿ ಸಿಬ್ಬಂಧಿಗಳು ಮತ್ತು  ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರು. ಈ ವೇಳೆ 15 ಜನರನ್ನ ಆಸ್ಪತ್ರೆಗೆ ಕಳುಹಿಸಿದ್ದ ಸಿಬ್ಬಂಧಿಗಳು. ಶಾಸಕರು ಬರಲಿ ನೋಡೋಣ ಎಂದು ಗಲಾಟೆ ತಗೆದು ಕಿಡಿಗೇಡಿಗಳು ಕ್ವಾರಂಟೈನ್ ಮಾಡಲು ಅಳವಡಿಸಿದ್ದ ತಗಡುಗಳನ್ನು ಕಿತ್ತು ಹಾಕಿದ್ದಾರೆ. 33 ಜನರನ್ನ ವಶಕ್ಕೆ ಪಡೆಯುವಾಗ ಗಲಾಟೆ ಮಾಡಿದ 100ಕ್ಕೂ ಹೆಚ್ಚು ಮಂದಿ  ಸ್ಥಳೀಯರಿಂದ ಪೊಲೀಸರ ಮೇಲೆಯೇ ಮುಗಿ ಬಿದ್ದಿದ್ದಾರೆ. ಈ ವೇಳೆ ಪೊಲೀಸ್ ಬ್ಯಾರಿಕೇಡ್ ಗಳನ್ನ ಬಿಸಾಡಿ‌ ಗಲಾಟೆ ಮಾಡಿದ್ದಾರೆ.

ಪಾದರಾಯನಪುರ ವಾರ್ಡ್ ನಲ್ಲಿ ಉದ್ವಿಗ್ಞ ಪರಿಸ್ಥಿತಿ ಇದ್ದು, ಎಲ್ಲಾ ಕಡೆ ಬ್ಯಾರಿಕೇಡ್ ಹಾಕಿ ನಿರ್ಭಂಧ ಹೇರಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ಹೊರಗಡೆ ಹೋಗೋಕೆ ಆಗ್ತಿಲ್ಲ. ಊಟ ಸಿಗ್ತಿಲ್ಲ ಎಂದು ಆಕ್ರೋಶ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಪಾದರಾಯನಪುರ ಗುಡ್ಢದಹಳ್ಳಿ ಅರ್ಫತ್ ನಗರದಲ್ಲಿ ಘಟನೆ ನಡೆದಿದೆ. ಪಾದರಾಯನಪುರ ವಾರ್ಡ್ ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here