


ಬೆಂಗಳೂರು: ಕೊವೀಡ್-19 ತಡೆಗಟ್ಟುವ ಹಿನ್ನೆಲೆ ಎರಡನೇ ಹಂತದ ಲಾಕ್ ಡೌನ್ ಮೇ.3 ರ ತನಕ ಇರಲಿದ್ದು, ಏ.20ರ ನಂತರ ಕೆಲವು ವಿನಾಯಿತಿಗಳು ಇರಲಿವೆ ಎಂದು ಘೋಷಿಸಿತ್ತು.
ಆದರೆ ಇವತ್ತು ನಡೆದ ಸಚಿವ ಸಂಪುಟ ಸಭೆಯಲ್ಲಿ ಮೇ 3ರ ತನಕ ಲಾಕ್ಡೌನ್ ಇರುತ್ತದೆ. ಹೀಗಾಗಿ ಯಾವುದೇ ರಿಯಾಯಿತಿ ಇರಲ್ಲ. ರಾಜ್ಯವೇ ಫುಲ್ ಲಾಕ್ಡೌನ್ ಆಗುತ್ತದೆ ಎಂದು ಸಚಿವ ಮಾಧುಸ್ವಾಮಿ ಘೋಷಣೆ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಏ.20ರಿಂದ ಅಂದರೆ ಇಂದಿನಿಂದ ಐಟಿ-ಬಿಟಿ ಕಂಪನಿ ಓಪನ್ ಆಗುತ್ತವೆ ಎಂದು ಹೇಳಿದ್ದರು. ಆದರೆ ಸಂಪುಟ ಸಭೆಯಲ್ಲಿ ಐಟಿ-ಬಿಟಿ ಕಂಪನಿ ಓಪನ್ ಮಾಡದಿರಲು ನಿರ್ಧರಿಸಲಾಗಿದೆ. ಕೇರಳ, ಉತ್ತರ ಪ್ರದೇಶ ಮಾದರಿಯಲ್ಲಿ ಸುಗ್ರಿವಾಜ್ಞೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಆದ್ದರಿಂದ ರಾಜ್ಯದಲ್ಲಿ ನಾಳೆಯಿಂದ ಫುಲ್ ಟಫ್ ರೂಲ್ಸ್ ಜಾರಿಯಾಗಲಿದೆ.





