



ಬೆಳ್ತಂಗಡಿ : ಇಲ್ಲಿನ ಶಿರ್ಲಾಲು ಗ್ರಾಮದ ಪುದ್ದರಬೈಲು ನಿವಾಸಿ ಬೇಬಿ ಸಾಲಿಯಾನ್(72) ಸೋಮವಾರ ಬೆಳಗಿನ ಜಾವ ಸ್ವಗೃಹದಲ್ಲಿ ನಿಧನರಾದರು.
ಉತ್ತಮ ಕೃಷಿಕರಾಗಿದ್ದ ಇವರು, ದೀರ್ಘಕಾಲದ ಅಸೌಖ್ಯದಿಂದ ಬಳಲುತ್ತಿದ್ದರು.
ಮೃತರು ಪತ್ನಿ ಲೀಲಾವತಿ, ಮೂವರು ಗಂಡು ಹಾಗೂ ಒಬ್ಬಳು ಹೆಣ್ಣು ಮಗಳನ್ನು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
ಮೃತರ ಮನೆಗೆ ಮಾಜಿ ಶಾಸಕ ಕೆ. ವಸಂತ ಬಂಗೇರ, ಗಂಗಾಧರ ಮಿತ್ತಮಾರ್ ಮುಂತಾದವರು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.






