ಬಂಟ್ವಾಳ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣದಿಂದ ಸಾವನ್ನಪ್ಪಿದ ಪ್ರಥಮ ಪ್ರಕರಣ ಇದಾಗಿದೆ.
ಕೊರೊನಾದಿಂದ ಮುಕ್ತಿ ಹೊಂದಲು ಮುಂದಾಗಿದ್ದ ಜಿಲ್ಲೆಗೆ ಬಹು ದೊಡ್ಡ ಶಾಕಿಂಗ್ ನ್ಯೂಸ್ ಇದಾಗಿದೆ.
ಕೊರೊನಾದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ಇಂದಿನಿಂದಲೇ ಸೀಲ್ ಡೌನ್ ಗೆ ಜಿಲ್ಲಾಡಳಿತ ಆದೇಶ ಮಾಡಿದೆ.

ಮೂರು ವಿಭಾಗದಲ್ಲಿ ವಿಂಗಡನೆ ಮಾಡಲಾಗಿದೆ.
ಕೊರೊನಾ ಪತ್ತೆಯಾದ ಮನೆಯ ಸುತ್ತಲೂ
ಕಂಟೈನ್ ಮೆಂಟ್ ಏರಿಯಾ, 100 ಮೀ.ಏರಿಯಾ ಸಂಪೂರ್ಣ ಬಂದ್( ಸೀಲ್ ಡೌನ್) ಉಳಿದಂತೆ 1.ಕಿಮೀ ವ್ಯಾಪ್ತಿಯಲ್ಲಿ ಇನ್ನರ್ ಬಫರ್ ಝೋನ್. ಅ ವ್ಯಾಪ್ತಿಯಯಲ್ಲಿ ಬರುವ ಪ್ರತಿ ಮನೆಗಳಲ್ಲೂ ಆರೋಗ್ಯ ಇಲಾಖೆ/ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಹೆಚ್ಚಿನ ನಿಗಾ ವಹಿಸಬೇಕು.
ಬಫರ್ ಝೋನ್ 5.ಕಿಮೀ ವ್ಯಾಪ್ತಿಯಲ್ಲಿ ಬಫರ್ ಝೋನ್ ಇದ್ದು, ಈ ಪ್ರದೇಶದಲ್ಲಿ ಕೊರೊನಾ ಹರಡುವ ಸಾಧ್ಯತೆಗಳು ಹೆಚ್ಚು ಇರುವುದರಿಂದ ಸಾಮಾಜಿಕ ಅಂತರ ಸೇರಿದಂತೆ, ವೈರಸ್ ಹರಡಂತೆ ಇರುವ ಆದೇಶಗಳು ಕಟ್ಟುನಿಟ್ಟಾಗಿ ಜಾರಿಗೊಳ್ಳಬೇಕು.

 

ಬೆಳಿಗ್ಗೆ ಬಂಟ್ವಾಳ ಪೇಟೆ ಸಂಪೂರ್ಣ ಬಂದ್. ಬಿಸಿರೋಡ್ ಬಸ್ತಿಪಡ್ಪು ರಸದತೆ, ಬಡ್ಡಕಟ್ಟೆ, ನೆರೆ ಪರಿಹಾರ ರಸ್ತೆ, ಜಕ್ರಿಬೆಟ್ಟು, ಬೈಪಾಸನಿಂದ ಪೇಟೆಗೆ ಬರುವ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿ ಪೋಲೀಸ್ ವಿಶೇಷ ಕಣ್ಗಾವಲು ಇಡಲಾಗಿದೆ.
ಸೀಲ್ ಡೌನ್ ಅಗಿರುವ ಬಂಟ್ವಾಳ ಪೇಟೆಯ ಪ್ರದೇಶದಲ್ಲಿ ಪ್ರತಿ ಮನೆಮನೆಗಳಿಗೂ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಬಗ್ಗೆ  ತಾಲೂಕು ಆಡಳಿತದ ಎ.20 ರಂದು ತೀರ್ಮಾನ ಕೈಗೊಳ್ಳಲಿದೆ. ನಾಳೆ ಬೆಳಿಗ್ಗೆ ಬಂಟ್ವಾಳ ಪೇಟಗೆ ಬಂದರೆ ಕೇಸು ದಾಖಲಾಗುತ್ತದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here