ಬ್ಯಾಂಕ್ ಮುಂದೆ ಯಾಕ್ರೀ ಜನ, ಗುಂಪು ಗುಂಪಾಗಿ ನಿಲ್ಲುವುದು ಸರಿನಾ, ಸಾಮಾಜಿಕ ಅಂತರ ಎಲ್ಲಿದೆ ಎಂದು ಮಂಗಳೂರು ಎಸ್.ಪಿ.ಲಕ್ಮೀಪ್ರಸಾದ್ ಗರಂ ಆಗಿದ್ದಾರೆ.

ಜಿಲ್ಲೆಯ ಪ್ರತಿ ಬ್ಯಾಂಕ್ ನಲ್ಲೂ ಇದೇ ಸ್ಥಿತಿ ಗಮನಿಸಿದ ಎಸ್.ಪಿ. ಪೊಲೀಸ್ ಅಧಿಕಾರಿಗಳಲ್ಲಿ ಬ್ಯಾಂಕ್ ಜವಬ್ದಾರಿಯಿಂದ ಕೆಲಸ ಮಾಡಲಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿದ್ದಾರೆ.

ಈ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ರಶ್ಮಿ ಎಸ್.ಆರ್. ಎಲ್ಲಾ ಬ್ಯಾಂಕ್ ಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿ, ಎಲ್ಲಾ ಬ್ಯಾಂಕ್ ಗಳಿಗೂ ಎಚ್ಚರಿಕೆ ನೀಡಿದ್ದಾರೆ.

 ಬಂಟ್ವಾಳ ವೃತ್ತದಲ್ಲಿ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಮತ್ತು ಎಸ್.ಐ.ಗಳಾದ ಪ್ರಸನ್ನ, ಅವಿನಾಶ್, ವಿನೋದ್ ರೆಡ್ಡಿ, ಸಂತೋಷ್ ಬಿ.ಪಿ.ರಾಜೇಶ್ ಕೆ.ವಿ  ಹಾಗೂ ಪುಂಜಾಲಕಟ್ಟೆ ವ್ಯಾಪ್ತಿಯಲ್ಲಿ ಎಸ್.ಐ.ಸೌಮ್ಯ ಅವರು ಎಲ್ಲಾ ಬ್ಯಾಂಕ್ ಗಳಿಗೂ ತೆರಳಿ ಇಂದು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗ್ರಾಹಕರಿಗೆ ಮನವಿ ಮಾಡಿಕೊಂಡರು.

ಬಂಟ್ವಾಳ: ಅಂಗಡಿಗಳಲ್ಲಿ ಮೆಡಿಕಲ್ ಶಾಪ್ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ವಹಿವಾಟು ಮಾಡುವಂತಿಲ್ಲ. ಆದರೆ ಈ ಆದೇಶ ಬ್ಯಾಂಕ್ ಗಳಿಗೂ ಯಾಕೆ ಅನ್ವಯಿಸಿದಂತಿಲ್ಲ ಎಂಬುದೇ ಅರ್ಥವಾಗದ ಮಾತು. ರಾಷ್ಟ್ರೀಕೃತ ಬ್ಯಾಂಕುಗಳ ಮುಂಬಾಗದಲ್ಲಿ ಜನನೋ ಜನ.
ಹಳ್ಳಿಯಿಂದ ಬಾಡಿಗೆ ರಿಕ್ಷಾ ಮಾಡಿಕೊಂಡು ಬ್ಯಾಂಕ್ ವ್ಯವಹಾರಕ್ಕೆಂದು ಪೇಟೆಗೆ ಬರುತ್ತಾರೆ. ಬಿಸಿಲಿನಲ್ಲಿ ನಿಲ್ಲುತ್ತಾರೆ ಆದರೆ ಬ್ಯಾಂಕಿನವರು ಮಾತ್ರ ಬ್ಯಾಂಕ್ ಒಳಗೆ ಆರಾಮವಾಗಿ ಎ.ಸಿ.ಅಥವಾ ಫ್ಯಾನ್ ನ ಅಡಿಯಲ್ಲಿ ಕೆಲಸ ಮಾಡುತ್ತಾ ಜನರ ಕಡೆ ಗಮನನೇ ಹಾಕವುದಿಲ್ಲ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಾ ಇದೆ.

ಬ್ಯಾಂಕ್ ಸಿಬ್ಬಂದಿಗಳು ವ್ಯವಹಾರದ ವೇಳೆ ಅವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಬೇಕು, ಜೊತೆಗೆ ಕ್ಯೂ ನಿಂತ ವೇಳೆ ನೆರಳಿನ ಆಶ್ರಯ ಕೂಡಾ ಮಾಡಬೇಕು ಎಂಬುದು ಗ್ರಾಹಕರ ಒತ್ತಾಯ.

ಬ್ಯಾಂಕ್ ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಲು ಪೊಲೀಸ್ರೇ ಬರಬೇಕಾ..ಹೀಗೊಂದು ಮಾತುಗಳು ಕೂಡಾ ಕೇಳಿ ಬರುತ್ತಾ ಇದೆ. ಎಲ್ಲರಿಗೂ ನಿಯಮಗಳು ಒಂದೇ ಅಲ್ವಾ..ಜನರಿಗೆ ಅವಧಿಯೊಳಗೆ ಮನೆ ಸೇರಬೇಕು, ಇಲ್ಲದಿದ್ದರೆ ಪೋಲೀಸರ ಕಿರಿಕ್. ಆದರೆ ನಿಗದಿತ ಅವಧಿಯಲ್ಲಿ ಬ್ಯಾಂಕ್ ವ್ಯವಹಾರ ಗಳು ಅಗುತ್ತಿಲ್ಲ, ಜನ ಗುಂಪು ಗುಂಪಾಗಿ ಬ್ಯಾಂಕ್ ಮುಂಭಾಗದಲ್ಲಿ ನಿಲ್ಲದೆ ವಿಧಿಯಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೂ ಪೊಲೀಸ್ ರೇ ಬರಬೇಕಾ. ಬ್ಯಾಂಕ್ ಅಧಿಕಾರಿಗಳು ಯಾಕೆ ಜವಬ್ದಾರಿಯಿಂದ ಕೆಲಸ ಮಾಡಬಾರದು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಬ್ಯಾಂಕ್ ವ್ಯವಹಾರದಲ್ಲೂ ಯಾಕೆ ಕೊಂಚ ಬದಲಾವಣೆ ಮಾಡಬಾರದು ? ಈ ರೀತಿಯ ಮಾತುಗಳು ಕೂಡಾ ಕೇಳಿ ಬಂದಿದೆ.ಅಂದರೆ ಸಾರ್ವಜನಿಕರು ಮನೆಯಿಂದ ಹೊರ ಬರಬಾರದು ಎಂಬ ಅದೇಶದಂತೆ ಗ್ರಾಹಕರಿಗೆ ಬ್ಯಾಂಕ್ ನ ವ್ಯವಹಾರವನ್ನು ಸಹಾಯವಾಣಿ ಮೂಲಕ ಮನೆ ಮನೆಗೆ ಸಿಬ್ಬಂದಿ ಗಳ ಮೂಲಕ ಮಾಡಲು ಯಾಕೆ ಪ್ರಯತ್ನ ಮಾಡಬಾರದು ?

ಭಯ ಬೇಡ ಹಣ ವಾಪಸ್ಸು ಹೋಗಲ್ಲ. ಬುಧವಾರ ಬಂಟ್ವಾಳ, ಬಿ.ಸಿ.ರೋಡಿನ ಬ್ಯಾಂಕುಗಳಲ್ಲಿ ರಶ್ ಕಂಡು ಬಂತು.

ಸರಕಾರದ ಜನ್ ಧನ್ ಖಾತೆಗೆ 500 ರೂ ಹಣ ವಾಪಸ್ ಹೋಗುತ್ತದೆ ಎಂದು ಕಿಡಿಗೇಡಿಗಳು ವದಂತಿ ಹಬ್ಬಿಸಿದ ಕಾರಣ ಕೆಲವರು ಹಣವನ್ನು ಪಡೆಯಲೆಂದು ಕ್ಯೂ ನಿಲ್ಲುತ್ತಿದ್ದರು. ಕೆಲವು ಬ್ಯಾಂಕುಗಳಲ್ಲಿ ಸಾಮಾಜಿಕ ಅಂತರವನ್ನೂ ಕಾಪಾಡದೆ  ಗುಂಪುಗೂಡಿದ್ದು ಸಮಸ್ಯೆಗೆ ಕಾರಣವಾಯಿತು.

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯವಹಾರ ಮಾಡುವ ಮತ್ತು ಗ್ರಾಹಕರಿಗೆ ಸರಿಯಾದ ವ್ಯವಸ್ಥೆ ಮಾಡದ ಬ್ಯಾಂಕ್ ಅಧಿಕಾರಿಗಳ ಮೇಲೆ ಯಾಕೆ ಕ್ರಮಕೈಗೊಳ್ಳಬಾರದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here