ಬಂಟ್ವಾಳ: ಇಡೀ ಜಗತ್ತು ಕೊರೊನಾದಿಂದ ನಲುಗಿತ್ತಿರುವಾಗ ಭಾರತ ಕೂಡಾ ಮುಂಜಾಗೃತ ಕ್ರಮ ವಹಸಿಲು ಪ್ರಾರಂಭ ಮಾಡಿದ ಪ್ರಥಮ ಅವಧಿಯಲ್ಲೇ ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯಕ್ ಅವರು ಕೊರೊನಾ ವೈರಸ್ ಜಾಗೃತಿಗಾಗಿ ಜಿಲ್ಲೆಯಲ್ಲಿ ಪ್ರಥಮವಾಗಿ ಮಾ.14 ರಂದು ಬಂಟ್ವಾಳ ಸರಕಾರಿ ತಾಲೂಕು ಆಸ್ಪತ್ರೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಆಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು.

ಜೊತೆಗೆ ತಾಲೂಕಿನಲ್ಲಿ ಅಂತಹ ಪ್ರಕರಣಗಳು ಪತ್ತೆಯಾದರೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆಯೂ ಮಾಹಿತಿ ಪಡೆದ ಶಾಸಕರು ಎಲ್ಲಾ ಪೂರ್ವ ತಯಾರಿಗೆ ಸೂಚಿಸಿದ್ದರು.
ಅಲ್ಲದೆ ಮಾ.15 ರಂದು ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶಾಸಕರು ತಹಶೀಲ್ದಾರ್, ತಾಲೂಕು ಆರೋಗ್ಯ ಅಧಿಕಾರಿ, ಪೋಲೀಸ್ ಇಲಾಖೆ , ದೇವಸ್ಥಾನದ ಆಡಳಿತ ವರ್ಗ ಹಾಗೂ ಆರ್ಚಕ ವರ್ಗದ ಸಭೆ ನಡೆಸಿ ಪೋಳಲಿ ಜಾತ್ರೋತ್ಸವವನ್ನು ಸರಳ ರೀತಿಯಲ್ಲಿ ಆಚರಣೆ ಮಾಡುವ ಬಗ್ಗೆಯೂ ಚರ್ಚಿಸಿದ್ದಾರೆ.
ನಂತರದ ದಿನದಲ್ಲಿ ತಹಶೀಲ್ದಾರ್ ರಶ್ಮಿ ಎಸ್. ಆರ್.  ಹಾಗೂ ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ದೀಪಾ ಪ್ರಭು ಬಂಟ್ವಾಳ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವೈದ್ಯಾಧಿಕಾರಿಗಳು, ಅಲ್ಲಿನ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಂಡರು. ವಿದೇಶದಿಂದ ಬಂದ ಎಲ್ಲಾ ವ್ಯಕ್ತಿಗಳ ಮೇಲೆ ನಿಗಾ ವಹಿಸಿ ಹೋಂ‌ ಕ್ವಾರಂಟೈನ್ ನಲ್ಲಿರಿಸಿದ ಪ್ರತಿಯೊಬ್ಬರ ಆರೋಗ್ಯ ವಿಚಾರಣೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಬಂಟ್ವಾಳ ತಾಲೂಕಿನ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು ಹೊರnರಾಜ್ಯಗಳಿಂದ ಬಂದವರನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಿ ಅ ಗ್ರಾಮದ ಗ್ರಾಮ ಕರಣೀಕ ಹಾಗೂ ಆಶಾ ಕಾರ್ಯ ಕರ್ತೆಯರಿಂದ ಮಾಹಿತಿ ಪಡೆಯುತ್ತಿದ್ದರು.
ವಿದೇಶದಿಂದ ಬಂದ ವ್ಯಕ್ತಿಯೋರ್ವ
ವೆನ್ಲಾಕ್ ಆಸ್ಪತ್ರೆಯಿಂದ ತಪ್ಪಿಸಿಕೊಂಡ ಬಂದು ವಿಟ್ಲದ ಮನೆಯೊಂದರಲ್ಲಿ ಇದ್ದ ವೇಳೆ ಆತನನ್ನು ಮನವೊಲಿಸಿ ಆಸ್ಪತ್ರೆಗೆ ದಾಖಲಿಸಿದವರು ಬಂಟ್ವಾಳ ತಹಶೀಲ್ದಾರ್ ಹಾಗೂ ತಾಲೂಕು ವೈದ್ಯಾಧಿಕಾರಿ.
ಶಾಸಕರ ಸಹಾಯವಾಣಿ ಜೊತೆಗೆ ತಹಶೀಲ್ದಾರ್ ಕಚೇರಿಯ ಕಂಟ್ರೋಲ್ ರೂಂ ವ್ಯವಸ್ಥೆಗಳು ಬಂಟ್ವಾಳ ತಾಲೂಕಿನ ಜನರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದ ರೀತಿಯಲ್ಲಿ ಕೆಲಸ ಮಾಡಿದೆ.

ತಾಲೂಕಿನಾಧ್ಯಂತ ಪ್ರತಿದಿನ ಲಾಕ್ ಡೌನ್ ಅವಧಿಯಲ್ಲಿನ ಸ್ಥಿತಿಯನ್ನು ಗಮನಿಸುತ್ತಿರುವ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್.
ಪ್ರಥಮ ಹಂತದ ಲಾಕ್ ಡೌನ್ ಅವಧಿಯ ಕೊನೆಯ ದಿನ ಇವತ್ತು .
ಕಳೆದ 21 ದಿನಗಳಿಂದ ನಿರಂತರವಾಗಿ ಲಾಕ್ ಡೌನ್ ಸಮಯದಲ್ಲಿ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಬಹಳ ಅಚ್ಚು ಕಟ್ಟಾಗಿ ಮಾಡಿದ ಕೀರ್ತಿ ರಶ್ಮಿ ಅವರಿಗೆ ಸಲ್ಲುತ್ತದೆ.
ತಾಲೂಕಿನ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿದ್ದಾರೆ. ಜೊತೆಗೆ ಅಲ್ಲಿನ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಬಿಸಿರೋಡು ಬಸ್ ನಿಲ್ದಾಣದಲ್ಲಿರುವ ನಿರಾಶ್ರಿತರು ಹಾಗೂ ಬಿಕ್ಷುಕರಿಗೆ ಸರಿಯಾದ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಬರುತ್ತಿದೆಯಾ ಎಂದು ಸ್ವತಃ ಅವರೇ ಕೇಳಿದರು, ಜೊತೆಗೆ ಪರಿಶೀಲನೆ ಕೂಡಾ ನಡೆಸುತ್ತಿದ್ದಾರೆ.
ಕಳೆದ 21 ದಿನಗಳ ಕಾಲವೂ ತಾಲೂಕಿನ ಎಲ್ಲಾ ಅಧಿಕಾರಿಗಳನ್ನು ಹತೋಟಿಯಲ್ಲಿಟ್ಟುಕೊಂಡು ಯಾವುದೇ ಸಮಸ್ಯೆಯಿಲ್ಲದ ರೀತಿಯಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂಬುದು ಸತ್ಯ ವಿಚಾರ.
ಮುಂದಿನ ಸರಕಾರದ ಆದೇಶ ಯಾವ ರೀತಿ ಇದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಮುಂದಿನ ಅವಧಿಯಲ್ಲಿ ಇಂತಹ ದೇ ಉತ್ತಮ ವ್ಯವಸ್ಥೆಗಳು ತಾಲೂಕಿನ ಜನತೆಗೆ ಇಲ್ಲಿನ ಅಧಿಕಾರಿಗಳಿಂದ ಸಿಗಲಿ ಎಂಬುದೇ ಹಾರೈಕೆ.

ಡಾ. ದೀಪಾ ಪ್ರಭು ಇವರ ಕಾರ್ಯ ತೆರೆಮರೆಯಲ್ಲಿ ಸಾಗುತ್ತಿತ್ತು. ಯಾವಾಗಲೂ ಬ್ಯೂಸಿಯಾಗಿದ್ದರು.
ರಾತ್ರಿ ಹಗಲು ಕಣ್ಣಿಗೆ ನಿದ್ದೆಯಿಲ್ಲದೆ 21 ದಿನಗಳ ಪ್ರಥಮ ಅವಧಿಯನ್ನು ಮುಗಿಸಿದ್ದಾರೆ.
ಅವರ ಮನವಿ ಇಷ್ಟೇ ಕೊರೊನಾ ಸಂಪೂರ್ಣ ಹತೋಟಿಗೆ ಬರುವವರೆಗೆ ಯಾರು ಕೂಡಾ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ ಅದು ತಾಲೂಕಿನ ಜನತೆ ವೈದ್ಯಲೋಕಕ್ಕೆ ನೀಡುವ ಅತೀ ದೊಡ್ಡ ಉಡುಗೊರೆ ಎಂದು ಹೇಳುತ್ತಾರೆ. ಅವರ ಶ್ರಮದಿಂದ ಜಾಗೃತಿಯ ಮೂಲಕ ಪ್ರಥಮ‌ ಹಂತದ ಲಾಕ್ ಡೌನ್ ನಲ್ಲಿ ಬಂಟ್ವಾಳ ತಾಲೂಕು ನಿರಾಳವಾಗಿದೆ.

ಪೋಲೀಸ್ ಇಲಾಖೆ ಪಾತ್ರ ಅತೀ ದೊಡ್ಡದು:
ಬಂಟ್ವಾಳ ಡಿ.ವೈಎಸ್.ಪಿ.ವೆಲಂಟೈನ್ ಡಿ.ಸೋಜ ನೇತೃತ್ವದ ಉತ್ತಮ ತಂಡ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಿದೆ.
ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ಜೊತೆಯಲ್ಲಿ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್, ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ, ನಗರ ಠಾಣಾ ಅಪರಾಧ ವಿಭಾಗದ ಎಸ್. ಐ ಸಂತೋಷ್, ಟ್ರಾಫಿಕ್ ಎಸ್.ಐ.ಗಳಾದ ರಾಜೇಶ್, ರಾಮ ನಾಯ್ಕ್, ವಿಟ್ಲ ಎಸ್.ಐ.ವಿನೋದ್ ರೆಡ್ಡಿ, ಪುಂಜಾಲಕಟ್ಟೆ ಎಸ್.ಐ.ಸೌಮ್ಯ ಹಾಗೂ ಅವರ ಇಡೀ ತಂಡ ಕೆಲಸ ಮಾಡಿದ ಫಲವಾಗಿ ಪ್ರಥಮ‌ ಹಂತದ ಲಾಕ್ ಡೌನ್ ಯಶಸ್ಸು ಕಂಡಿದೆ.

ಕೊರೊನಾ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದು ಪೋಲೀಸ್ ಇಲಾಖೆ ಜೊತೆಗೆ ಕಂಟ್ರೋಲ್ ಗೆ ತರುವಲ್ಲಿ ಇಡೀ ದೇಶದಲ್ಲಿ ಅತೀ ಹೆಚ್ಚಿನ ಪಾತ್ರ ಪೋಲೀಸರದ್ದು ಎಂದು ಹೇಳಿದರೆ ತಪ್ಪಿಲ್ಲ.
ಅವರು ಲಾಠಿ ಹಿಡಿದು ಜನರನ್ನು ಹೊರಗೆ ಬರಲು ಬಿಡದ ಹಿನ್ನೆಲೆಯಲ್ಲಿ ಇಂದು ಬಂಟ್ವಾಳ ತಾಲೂಕು 21 ದಿನಗಳಲ್ಲಿ ಯಾವುದೇ ಪ್ರಕರಣ ಗಳು ಇಲ್ಲದೆ ಒಂದು ರೀತಿಯಲ್ಲಿ ಸಂತಸದಲ್ಲಿದ್ದೇವೆ.
ಅವರಿಗೆ ಊಟ ತಿಂಡಿ ಸಿಕ್ಕಿದೆಯಾ ನಿದ್ದೆ ಮಾಡಿದ್ದಾರಾ ಯಾವುದನ್ನು ಜನ ಕೇಳಿಲ್ಲ, ಪೋಲೀಸರು ಹೊರಗೆ ಹೋದರೆ ಲಾಠಿ ಬೀಸುತ್ತಾರೆ ಎಂಬ ಆರೋಪ ಮಾತ್ರ ಮಾಡುತ್ತಾ ಬಂದ ನಾವು ಅವರ ಶ್ರಮ‌ ವ್ಯರ್ಥವಾಗದ ರೀತಿಯಲ್ಲಿ ಮುಂದಿನ ಕ್ರಮವನ್ನು ಪಾಲಿಸೋಣ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here