ಬಂಟ್ವಾಳ :ಕೋವಿಡ್ 19 ವೈರಾಣು ಹರಡದಂತೆ ಸರಕಾರ ಲಾಕ್ ಡೌನ್ ಮಾಡಿದ್ದು, ಇದರಿಂದ ಹಾಲು ಉತ್ಪಾದಕರಿಗೆ ಆರ್ಥಿಕ ಸಂಕಷ್ಟ ಆಗಿರುವ ಹಿನ್ನೆಲೆಯಲ್ಲಿ ಬೋಳಂತೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಾಲು ಹಾಕುವ ಪ್ರತೀ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ, ತಲಾ 25 ಕೆಜಿಯಂತೆ ಅಕ್ಕಿ , ಸಂಘದ ವ್ಯಾಪ್ತಿಯ 74 ಬಡ ಕುಟುಂಬಗಳಿಗೆ ತಲಾ 10 ಕೆಜಿ ಯಂತೆ ಅಕ್ಕಿ ಹಾಗೂ ಜಿನಸು ಸಾಮಾನು, ವ್ಯಾಪ್ತಿಯ 4 ಆಶಾ ಕಾರ್ಯಕರ್ತೆಯರಿಗೆ ತಲಾ 25 ಕೆಜಿ ಅಕ್ಕಿ ಹಾಗೂ  ದಿನಸಿ ಸಾಮಾನು ಉಚಿತವಾಗಿ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ 2019 – 20 ನೇ ಸಾಲಿನಲ್ಲಿ ಸಂಘಕ್ಕೆ ಹಾಲು ಹಾಕಿದ ಪ್ರತೀ ಸದಸ್ಯರಿಗೆ ಪ್ರತಿ ಲೀಟರ್ ಮೇಲೆ 75 ಪೈಸೆಯಂತೆ ಒಟ್ಟು 1,49,508 ಪ್ರೊತ್ಸಹ ಧನ ಘೊಷಣೆ ಮಾಡಿ ಮೊತ್ತವನ್ನು ಸದಸ್ಯರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಯಿತು .
ಇವತ್ತು ಬೆಳಿಗ್ಗೆ ಸಾಂಕೇತಿಕ ಕಾರ್ಯಕ್ರಮದಲ್ಲಿ ವಿತರಿಸಲಾಯಿತು .ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರೂ ಹಾಗೂ ದಕ ಹಾಲು ಒಕ್ಕೂಟದ ನಿರ್ದೇಶಕ ಸುಧಾಕರ ರೈ ,ಉಪಾಧ್ಯಕ್ಷ ನಾಣ್ಯಪ್ಪ ಪೂಜಾರಿ, ದಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಎಸ್.ಪ್ರಬಾಕರ್, ವಿಸ್ತರಣಾಧಿಕಾರಿಗಳಾದ ದೇವರಾಜ್, ಜಗದೀಶ ಕಾರ್ಯದರ್ಶಿ ವಿಶ್ವನಾಥ, ಸಂಘದ ನಿರ್ದೇಶಕರುಗಳು ಹಾಗೂ ಸಿಬ್ಬಂದಿಗಳು ಉಪಸ್ತಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here