


ಬಂಟ್ವಾಳ: ಕೋವಿಡ್ -19 ಇವತ್ತು ಬಡವರು ಶ್ರೀಮಂತರು ಎನ್ನದೆ ಎಲ್ಲರನ್ನು ಕಾಡುತ್ತಿದೆ. ಅದರಲ್ಲೂ ದಿನಗೂಲಿ ನೌಕರರು ಹಾಗೂ ಬಡವರನ್ನ ಹೈರಾಣಾಗಿಸಿದೆ.
ಇಂತಹ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಸಾಮಾಜಿಕ ಕಾರ್ಯಕರ್ತರಾದ ವಾಲ್ತಾಜೆ ನಾರಾಯಣ ಪೂಜಾರಿಯವರು ಗ್ರಾಮದ ಹಲವೆಡೆ ತೆರಳಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಇವತ್ತು ದಿನ ಬಳಕೆಯ ಆಹಾರ ವಸ್ತುಗಳನ್ನ ವಿತರಿಸಿದ್ರು.
ಸಂಕಷ್ಟ ಸ್ಥಿತಿಯಲ್ಲಿ ಪಕ್ಷ ಬೇಧ ಮರೆತು ಬಡವರಿಗೆ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ. ವೈಯಕ್ತಿಕವಾಗಿ ತಮ್ಮಿಂದ ಆದ ಸಹಾಯ ತೋರಿದ್ದಾರೆ.






