ಬಂಟ್ವಾಳ: ಮಹಾಮಾರಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಭಾರತ ಸರ್ಕಾರ ಹೊಸ ಆಪ್ ಒಂದನ್ನು ಬಿಡುಗಡೆಗೊಳಿಸಿದೆ. ಭಾರತ ಸರ್ಕಾರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಕ ಬಿಡುಗಡೆ ಮಾಡಿರುವ ದೃಡೀಕೃತ ಕೊರೊನಾ ವೈರಸ್ ಪೊಸಿಟಿವ್ ಪ್ರಕರಣಗಳ ಮಾಹಿತಿ ಪಡೆಯಲು ಆರೋಗ್ಯ ಸೇತು ಕೊವಿಡ್-19 ಕಾರ್ಯನಿರ್ವಹಿಸುತ್ತಿದೆ. ವೈರಸ್ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಮೇಲೆ ನಿಗಾ ಇರಿಸುವ ಮತ್ತು ವೈಯಕ್ತಿಕ ಅಲರ್ಟ್ ಸಂದೇಶದ ಮೂಲಕ ಎಚ್ಚರಿಕೆ ನೀಡುವ ವಿಶೇಷತೆಯುಳ್ಳ ಆರೋಗ್ಯ ಸೇತು ಕೊವಿಡ್-19 ಟ್ರ್ಯಾಕರ್ ಮೊಬೈಲ್ ಆಪ್ ಅಳವಡಿಸಿಕೊಂಡರೆ ನಿಮ್ಮ ಬಳಿ ಕೊರೋನಾ ಪೊಸಿಟಿವ್ ದೃಢಪಟ್ಟಿರುವ ವ್ಯಕ್ತಿ ಬಂದರೆ, ಅಥವಾ ನಿಮ್ಮ ಸಮೀಪ ಇದ್ದರೆ ಕೂಡಲೇ ಆಪ್ ಅಲರ್ಟ್ ಆಗುವ ಮೂಲಕ ಎಚ್ಚರಿಸುತ್ತದೆ. ಹೀಗಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಈ ಅಪ್ ಉಪಯುಕ್ತವಾಗಿದೆ.


ಈ ಅಪ್ ಅನ್ನು ನೀವು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಪ್ಲೇ ಸ್ಟೋರ್ ನಲ್ಲಿ ಲಭ್ಯ. ಬ್ಲೂಟೂತ್ ಹಾಗೂ ಲೊಕೇಶನ್ ಆನ್ ಮಾಡಿರಬೇಕು.
ಈ ಆಪ್ ಅನ್ನು ಸಾರ್ವಜನಿಕರು, ಸರಕಾರಿ ನೌಕರರು, ಸ್ವಯಂ ಸೇವಕರು ಕಡ್ಡಾಯವಾಗಿ ಬಳಸಿ, ಎಚ್ಚರಿಕೆಯಿಂದರಬಹುದು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here