ಲಾಕ್ ಡೌನ್ ಅವಧಿಯನ್ನು ಇನ್ನಷ್ಟು ಬಿಗಿಗೊಳಿಸುವ ಮತ್ತು ಅ ಮೂಲಕ ಜನರ ಚಲನವಲನಗಳನ್ನು ಗಮನಿಸಲು ಡ್ರೋನ್ ಕ್ಯಾಮರಾದ ಮೂಲಕ ಚಿತ್ರೀಕರಣ ನಡೆಸುತ್ತಿದ್ದೇವೆ.
ಡ್ರೋನ್ ಬಳಕೆಯ ಸಂದರ್ಭದಲ್ಲಿ ಗುಂಪು ಸೇರಿದ ಯಾವುದೇ ಘಟನೆಗಳು ಕಂಡು ಬಂದಾಗ ಪೋಲೀಸ್ ಫ್ಲೈಯಿಂಗ್ ಸ್ವ್ಕಾಡ್ ಅಥವಾ ಹೈವೆ ಪಟ್ರೋಲ್ ವಾಹನ ಸ್ಥಳಕ್ಕೆ ಧಾವಿಸಿ ಸಮಸ್ಯೆ ಪರಿಹಾರ ಮಾಡುತ್ತದೆ ಎಂದು ಮಂಗಳೂರು ಎಸ್.ಪಿ.ಲಕ್ಮೀಪ್ರಸಾದ್ ಅವರು “ನಮ್ಮ ಬಂಟ್ವಾಳ” ಕ್ಕೆ ತಿಳಿಸಿದ್ದಾರೆ.
ಈಗಾಗಲೇ ಬಂಟ್ವಾಳ, ವಿಟ್ಲ, ಪುತ್ತೂರು ಪೋಲೀಸ್ ಠಾಣೆಯಲ್ಲಿ ಅಳವಡಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾಾರೆ.

ಬಂಟ್ವಾಳ: ಲಾಕ್ ಅವಧಿಯಲ್ಲಿ ಪೋಲೀಸರ ಕಣ್ಣು ತಪ್ಪಿಸಿ ಇನ್ನು ಮುಂದೆ ನೀವು ಹೋಗುತ್ತೇವೆ ಅಂದರೆ ಸಾಧ್ಯವಿಲ್ಲ.
ಲಾಕ್ ಅವಧಿಯಲ್ಲಿ ಜನ ಬೇಕಾಬಿಟ್ಟಿ ತಿರುಗಾಟ ನಡೆಸುತ್ತಾರೆ, ವಾಹನದಲ್ಲಿ ರೈಡ್ ಹೋಗುತ್ತಾರೆ, ಕ್ರಿಕೆಟ್ ಆಡುತ್ತಾರೆ, ಗಲ್ಲಿಗಲ್ಲಿಗಳಲ್ಲಿ ಗುಂಪು ಸೇರುತ್ತಾರೆ, ಅಂಗಡಿ ಬಾಗಿಲಿನಲ್ಲಿ ಜನ ಸೇರುತ್ತಾರೆ, ಸಾಮಾಗ್ರಿಗಳನ್ನು ಪಡೆಯುವಾಗ ಗುಂಪು ಸೇರುತ್ತಾರೆ, ಸುಮ್ಮನೆ ಗುಂಪು ಸೇರಿ ಮಾತನಾಡುತ್ತಾರೆ ಹೀಗೆ ಅನೇಕ ಕಾರಣಕ್ಕೆ ಮತ್ತು ಇಂತಹ ಅಪರಾಧಗಳನ್ನು ನಿಲ್ಲಿಸುವ ಸಲುವಾಗಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಮೀಪ್ರಸಾದ್ ಅವರು ಹೊಸ ಪ್ಲಾನ್ ಒಂದನ್ನು ಕಂಡು ಕೊಂಡಿದ್ದಾರೆ.
ಅದೇನಪ್ಪಾ ಹೊಸ ಪ್ಲಾನ್ ಅಂದರೆ ಎಲ್ಲಿ ಅವಶ್ಯಕತೆ ಇದೆಯಾ ಅಂತಹಾ ಪೋಲೀಸ್ ಠಾಣಾ ಸರಹದ್ದಿನಲ್ಲಿ ಡ್ರೋನ್ ಕ್ಯಾಮರಾ ಬಳಕೆ ಮಾಡಿ ಪತ್ತೆ ಹಚ್ಚುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ತೀರಾ ಅವಶ್ಯಕತೆ ಇರುವ ಬಂಟ್ವಾಳ , ವಿಟ್ಲ, ಪುತ್ತೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರೋನ್ ಬಳಕೆ ಮಾಡಲಾಗಿದೆ.
ಈ ಮೂಲಕ ಪೋಲೀಸರ ಶ್ರಮ ಕಡಿಮೆ ಮಾಡುವುದು ಇಂಧನ ಉಳಿಸುವುದು ಕೂಡಾ ಇವರ ಪ್ರಯತ್ನವಾಗಿದೆ.

ಲಾಕ್ ಅವಧಿಯಲ್ಲಿ ಜನರಿಗೆ ಎಷ್ಟು ಬುದ್ದಿ ಹೇಳಿದರೂ ಕಿವಿಗೆ ಹಾಕಿಕೊಳ್ಳುವುದಿಲ್ಲ.ಹಾಗಾಗಿ ಈ ಪ್ರಯತ್ನ ಮಾಡಿ ಯಶಸ್ಸು ಗಳಿಸಲು ಪ್ರಯತ್ನ ಪಡುತ್ತಿದ್ದಾರೆ.
ಈ ಡ್ರೋನ್ ಕ್ಯಾಮರಾ ಸುತ್ತಮುತ್ತಲಿನ ಸುಮಾರು 7 ಕಿ.ಮೀ ವ್ಯಾಪ್ತಿಯಲ್ಲಿ ಕ್ರಮಿಸಿ ಅಲ್ಲಿನ‌ ಚಿತ್ರ ಚಿತ್ರವನ್ನು ಠಾಣೆಯಲ್ಲಿ ಕುಳಿತು ಪತ್ತೆಹಚ್ಚಲು ಸಾಧ್ಯವಾಗುತ್ತದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here