ಬಂಟ್ವಾಳ ತಾಲೂಕಿನ ಎರಡು ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಸಂದರ್ಭದಲ್ಲಿ ಗ್ರಾಮದ ಜನರಿಗೆ ಅಧಿಕಾರಿಗಳಿಂದ ದೊರೆತ ಸ್ಪಂದನೆ ಸೂಪರ್!
ಜಿಲ್ಲಾಡಳಿತ ಅದೇಶದಂತೆ ಎರಡು ಗ್ರಾಮಗಳು ಸೀಲ್ ಡೌನ್ ಮಾಡಲಾಗಿತ್ತು. ಅದರೆ ಈ ಸಂದರ್ಭದಲ್ಲಿ ದಿನಬಳಕೆಯ ವಸ್ತಗಳನ್ನು ಹಾಗೂ ಸರಕಾರದ ರೇಷನ್ ಗಳನ್ನು ಸೊಸೈಟಿ ಹಾಗೂ ಗ್ರಾಮ ಕರಣಿಕ ರ ಮುಖಾಂತರ ಮನೆಮನೆಗೆ ತಲುಪಿಸುವ ಉತ್ತಮ ಕೆಲಸವನ್ನು ತಹಶೀಲ್ದಾರ್ ರಶ್ಮಿ ಎಸ್. ಆರ್.ನೇತ್ರತ್ವದಲ್ಲಿ ಮಾಡಲಾಗಿದೆ. ಜೊತೆಗೆ ಮಂಗಳೂರು ಎಸ್.ಪಿ.ಲಕ್ಮೀಪ್ರಸಾದ್ ನೇತ್ರತ್ವದಲ್ಲಿ ಗ್ರಾಮಾಂತರ ಎಸ್.ಐ.ಪ್ರಸನ್ನ ಈ ಎರಡು ಗ್ರಾಮದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಯಾರು ಕೂಡಾ ಮನೆಯಿಂದ ಹೊರಬರದಂತೆ ಕ್ರಮಕೈಗೊಂಡಿದ್ದಾರೆ . ಈಗಾಗಲೇ ಸಜೀಪನಡು ಗ್ರಾಮದಲ್ಲಿ ಅಧಿಕಾರಿಗಳ ಕ್ರಮ ಯಶಸ್ಸು ಕೂಡಾ ಕಂಡಿದೆ.ಬಳಿಕ ಈ ಗ್ರಾಮದಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ.ಪ್ರಸ್ತುತ ಇದೇ ಮಾದರಿಯಲ್ಲಿ ತುಂಬೆ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕೊರೊನಾ ಸೋಂಕಿನ ಎರಡು ಪ್ರಕರಣಗಳು ದೃಢಪಟ್ಟಿದ್ದು, ಹೀಗಾಗಿ ತಾಲೂಕು ಆಡಳಿತಕ್ಕೆ ಎರಡು ಗ್ರಾಮಗಳನ್ನು ಸೀಲ್ಡ್ ಡೌನ್ ಮಾಡುವ ಸವಾಲು ಎದುರಾಗಿದ್ದರೂ, ಇದರಲ್ಲಿ ಯಶಸ್ವಿಯಾಗಿದೆ.
ಪ್ರಾರಂಭದಲ್ಲಿ ಸಜೀಪನಡು ಗ್ರಾಮವನ್ನು ಕ್ವಾರಂಟೈನ್ ಮಾಡಲಾಗಿದ್ದು, ಬಳಿಕ ತುಂಬೆ ಗ್ರಾಮದ ಬಹುತೇಕ ಪ್ರದೇಶ ಕ್ವಾರಂಟೈನ್ ಆಗಿತ್ತು. ಸಜೀಪನಡುವಿನ ರೀತಿಯಲ್ಲೇ ತುಂಬೆ ಗ್ರಾಮದಲ್ಲೂ ಮನೆಯಿಂದ ಹೊರ ಬರಲಾಗದ ಗ್ರಾಮಸ್ಥರಿಗೆ ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ಆಡಳಿತ ವ್ಯವಸ್ಥೆ ಯಶ ಕಂಡಿದೆ. ಈ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿರುವ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್. ಹಾಗೂ ಗ್ರಾಮಾಂತರ ಪಿಎಸ್ಐ ಪ್ರಸನ್ನ ಅವರ ತಂಡ ತುಂಬೆ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here