ಬಂಟ್ವಾಳ: ರಾಜ್ಯದಲ್ಲಿ ಸಂತೆಯ ರೂಪದಲ್ಲಿ ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿಲ್ಲ ಎಂದು ಹೇಳಿದ್ದರು ಕೂಡಾ ದ.ಕ.ಜಿಲ್ಲೆಯ ಲ್ಲಿ ನಿರಾತಂಕ ವಾಗಿ ಬೀದಿ ಬದಿ ವ್ಯಾಪಾರ ಗಳು ನಡೆಯುತ್ತಾ ಇದೆ. ಈ ರೀತಿಯ ವ್ಯಾಪಾರ ದಿಂದಾಗಿ ಸೊಂಕು ಹರಡುವ ಲಕ್ಷಣಗಳು ಹೆಚ್ಚು ಇರುತ್ತದೆ ಎಂದು ಹೇಳಿದರು ಜನ ಕೇಳುವ ಸ್ಥಿತಿಯಲ್ಲಿ ಇಲ್ಲ, ಬೀದಿಬದಿ ವ್ಯಾಪಾರ ಗಳು ದಿನಕಳೆದಂತೆ ಹೆಚ್ಚಾಗುತ್ತಲೇ ಇದೆ, ಪೋಲೀಸ್ ಅಧಿಕಾರಿಗಳು ಇವರನ್ನು ಓಡಿಸುತ್ತಲೇ ಇದ್ದಾರೆ.
ಗುರುವಾರ ಕೈಕಂಬದಲ್ಲಿ ಬೀದಿಯಲ್ಲಿ ತರಕಾರಿ ಅಂಗಡಿಗಳ ಜೊತೆಯಲ್ಲಿ ದಿನಸಿ ಸಾಮಾಗ್ರಿಗಳು, ಒಣ ಮೀನು ಗಳು ಹೀಗೆ ಎಲ್ಲವನ್ನೂ ಮಾರಟ ಮಾಡಲು ಆರಂಭಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೋಲೀಸರು ತೆರವುಗೊಳಿಸಿದ್ದರು. ಆದರೆ ಮತ್ತೆ ಅದೇ ರೀತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬಿಸಿರೋಡಿನ ಕೈಕಂಬ ದಲ್ಲಿ ವ್ಯಾಪಾರ ಮಾಡುವ ದೃಶ್ಯಗಳು ಇಲ್ಲಿ ಕಾಣಸಿಗುತ್ತವೆ.

ಕಲ್ಲಡ್ಕ ಬೀದಿ ಬದಿ ವ್ಯಾಪಾರಿಗಳನ್ನು ಓಡಿಸಿದ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ನೇತ್ರತ್ವದ ಪೋಲೀಸ್ ತಂಡ

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಲ್ಲಡ್ಕ ಪೇಟೆಯಲ್ಲಿ ಬೀದಿಬದಿಯಲ್ಲಿ ಮಾರಾಟ ಜೋರಾಗಿ ನಡೆಯುತ್ತಿತ್ತು.ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಯ ನಿರ್ಲಕ್ಷ್ಯದಿಂದ ಸೊಂಕು ಹರಡುವ ಲಕ್ಷಣಗಳು ಹೆಚ್ಚು ಇರುವುದರಿಂದ ಪೋಲೀಸರು ಅವರನ್ನು ತೆರವುಗೊಳಿಸಿದರು.
ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಲ್ಲಿಯೂ ಹೆಚ್ಚಿನ ಮುಂಜಾಗ್ರತೆ ಅಗತ್ಯ.
ಹಾಗಾಗಿ ಹೆಚ್ಚಿನ ಜಾಗೃತಿ ಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವ ಬೀದಿ ಬದಿಯ ಜೊತೆ ಜನಸೇರುವ ಯಾವುದೇ ವ್ಯಾಪಾರ ಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಧಿಕಾರಿಗಳ ಮಾತಿಗೆ ಬೆಲೆ ಕೊಡದೆ ತಿರುಗಾಟ ನಡೆಸಿದರೆ , ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವಹಿವಾಟು ನಡೆಸಿದರೆ ದ.ಕ.ಜಿಲ್ಲೆಯೂ ಸೀಲ್ ಡೌನ್ ಅಗುವುದರಲ್ಲಿ ಸಂಶಯವಿಲ್ಲ. ಏನೇ ಇರಲಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರಕಾರದ ಅದೇಶವನ್ನು ನೀವು ನಾವು ಪಾಲಿಸಲೇಬೇಕಾಗಿದೆ.
ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪು ಸೇರುವ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶವನ್ನು ಬಂಟ್ವಾಳ ತಾಲೂಕಿನ ಅಧಿಕಾರಿಗಳು ನೀಡಲೇ ಬಾರದು ಎಂಬುದು ಸಾರ್ವಜನಿಕ ಒತ್ತಾಯವಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here