Friday, October 20, 2023

ರಾಜ್ಯದ ಈ 18 ಜಿಲ್ಲೆಗಳಲ್ಲಿ ಏಪ್ರಿಲ್ 14 ರ ನಂತರವೂ `ಲಾಕ್ ಡೌನ್’ ಮುಂದುವರಿಕೆ..?

Must read

ಮಂಗಳೂರು : ಕೊವೀಡ್-19 ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಆದೇಶದ ಮೇರೆಗೆ ಸಿ.ಎಂ. ರಾಜ್ಯದಲ್ಲಿ ಏಪ್ರಿಲ್ 14 ರವರೆಗೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆದರೆ, ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮುಂದುವರಿಸುವ ಕುರಿತಂತೆ ಇಂದು ಸಿಎಂ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು. 

ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿ ಇಂದಿಗೆ 16 ದಿನಗಳು ಕಳೆದಿವೆ. ಆದರೂ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೊರೊನಾ ತಡೆಗೆ ರಾಜ್ಯ ಸರ್ಕಾರವು ಮತ್ತೊಂದು ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ ಎನ್ನಲಾಗಿದೆ.

ಏಪ್ರಿಲ್ 14 ರ ಬಳಿಕ ಕರ್ನಾಟಕದ 18 ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿ, ಜನರಿಗೆ ಮನೆಯಿಂದ ಹೊರ ಬರದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲು ಸರ್ಕಾರ ಮುಂದಾಗಿದೆ.

ಕರ್ನಾಟಕದ 18 ಹಾಟ್ ಸ್ಪಾಟ್ ಜಿಲ್ಲೆಗಳು ಈ ಕೆಳಗಿನಂತಿವೆ:

  1. ಬೆಂಗಳೂರು ನಗರ-68
  2. ಮೈಸೂರು-37
  3. ದಕ್ಷಿಣ ಕನ್ನಡ -13
  4. ಚಿಕ್ಕಬಳ್ಳಾಪುರ -08
  5. ದಾವಣಗೆರೆ-03
  6. ತುಮಕೂರು -02
  7. ಗದಗ-01
  8. ಧಾರವಾಡ-01
  9. ಉಡುಪಿ-03
  10. ಬಾಗಲಕೋಟೆ -05
  11. ಮಂಡ್ಯ-04
  12. ಕೊಡಗು-01
  13. ಉತ್ತರ ಕನ್ನಡ-09
  14. ಬೀದರ್-10
  15. ಬಳ್ಳಾರಿ-06
  16. ಬೆಳಗಾವಿ-07
  17. ಬೆಂಗಳೂರು ಗ್ರಾಮಾಂತರ -03
  18. ಕಲಬುರಗಿ -09

More articles

Latest article