ಬಂಟ್ವಾಳ: ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲೊಂ ದಾದ ಸಜೀಪ ಬಿಸು ಜಾತ್ರೆ ಮುಂದೂಡಿಕೆ ಬಂಟ್ವಾಳ ತಾಲೂಕು ಸಜೀಪಮೂಡ ಗ್ರಾಮದ ಮಿತ್ತ ಮಜಲು ಕ್ಷೇತ್ರದಲ್ಲಿ ವರ್ಷಂಪ್ರತಿ ಜರಗುವ ಸಜೀಪ ಮಾಗಣೆಯ ಜಾತ್ರೆ ಡೆಡ್ಲಿ ಕೋರೋಣ ಸೋಂಕು ರೋಗ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಸರಕಾರದ ಆದೇಶದಂತೆ ಅನಿವಾರ್ಯವಾಗಿ ಮುಂದೂಡಲಾಗಿದೆ 11.4 20ರಿಂದ 16 4 20ರ ತನಕ ವಿಜ್ರಂಭಣೆ ಇಂದ ಜರುಗಬೇಕಾಗಿದ ಸಜಿಪ ಮಾಗಣಿ ಬಿಸು ಜಾತ್ರೆಯ ಪ್ರಯುಕ್ತ ವಾರ್ಷಿಕ ನೇಮೋತ್ಸವ ವನ್ನು ಸದ್ಯದ ಗೊಂದಲದ ಪರಿಸ್ಥಿತಿ ಸುಧಾರಣೆ ಆಗುವತನಕ ಮುಂದೂಡಲಾಗಿದೆ ಈ ಬಗ್ಗೆ ಸಜೀಪ ಮಾಗಣೆಯ ಆಡಳಿತ ದಾರ ಹಾಗೂ ದ ಕ ಜಿಪ ಮಾಜಿ ಅಧ್ಯಕ್ಷ ಬಿ ಸದಾನಂದ ಪೂಂಜ ರ ಅಧ್ಯಕ್ಷತೆಯಲ್ಲಿ ಜರಗಿದ ಸಮಾಲೋಚನೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು ಕ್ಷೇತ್ರದ ಸಮಸ್ತ ಭಕ್ತರು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲ ರೀತಿಯಿಂದ ಸಹಕರಿಸುವಂತೆ ಅವರು ವಿನಂತಿಸಿದರು ಈ ಸಂದರ್ಭದಲ್ಲಿ ಮಾಗಣೆಯ ತಂತ್ರಿಗಳಾದ ಸುಬ್ರಮಣ್ಯ ಬಟ್ ಎಂ ಸಜೀಪ ಗುತ್ತು ಗಡಿ ಪ್ರಧಾನ ರಾದ ಮುಂಡಪ್ಪ ಶೆಟ್ಟಿ ಯಾನೆ ಕೋಚು ಬಂಡಾರಿ ಬಿಜನ್ ತಾಡಿ ಗು ತ್ತು ಶಿವರಾಮ ಬಂಡಾರಿ ಮಾಡಂತ ಡಿ ಗು ತ್ತು ಯಶೋಧರ ರೈ ಶ್ರೀಕಾಂತ್ ಶೆಟ್ಟಿ ಸಂಕೇಶ ಜೀವನ್ ಆಳ್ವ ಅಗರಿ ಪ್ರದೀಪ್ ಶೆಟ್ಟಿ ಕೋಚು ಪೂಜಾರಿ ಸಾನದ ಮನೆ ಕುoಛ್ ಪೂಜಾರಿ ಸಂಕೇಶ ವೆಂಕಪ್ಪ ಪೂಜಾರಿ ನಟ್ಟಿಲು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here