ಮಂಗಳೂರು : ದುಡಿಯದೆ ಜೀವನ ಸಾಗಲ್ಲ, ಮನೆಯಲ್ಲಿ ದುಡಿಯುವ ಕೈಗಳಿಲ್ಲ, ಜೀವನ ಸಾಗಿಸುವುದು ಕಷ್ಟದ ಸ್ಥಿತಿ! ಅನಾರೋಗ್ಯದ ನಡುವೆಯೂ ಜೀವನ! ಅದರೂ ಬದುಕುವುದಕ್ಕಾಗಿ ಇತರರ ಸಹಾಯದ ನೆರಳು ಬೇಕಾಗಿದೆ. ಇದು ಮಂಗಳೂರು ಶಕ್ತಿನಗರ ನಿವಾಸಿ
ಗೃಹರಕ್ಷಕ ದಳದ ಸಿಬ್ಬಂದಿಯ ವ್ಯಥೆಯ ಕತೆ!

ಇವರ ಹೆಸರು ಚಂಪಾ ಚಮ್ಮಗಾರ್ತಿ. ಊರು ಮಂಗಳೂರು ಶಕ್ತಿನಗರದ ಮೊಗರೋಡಿ. ಅವಿವಾಹಿತರಾಗಿರುವ ಚಂಪಾ ಅವರದು ಹೋಂಗಾರ್ಡ್ ಕೆಲಸ.
ಕಳೆದ 26 ವರ್ಷಗಳಿಂದ ಇವರು ಗೃಹರಕ್ಷಕ ದಳದ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
12ರೂ ಸಂಬಳವಿರುವಾಗ ಅವರು ಗೃಹರಕ್ಷಕ ದಳಕ್ಕೆ ಸೇರಿದ್ದಾರೆ. ಬಳಿಕ ಕಳೆದ 11 ವರ್ಷಗಳಿಂದ ಕದ್ರಿ ಪೋಲೀಸ್ ಸ್ಟೇಷನ್ ಮೂಲಕ ಟ್ರಾಫಿಕ್ ನಲ್ಲಿ ಹೋಂಗಾರ್ಡ್ ಕೆಲಸ ಮಾಡುವ ನಿಷ್ಠಾವಂತ ಮಹಿಳೆ.
ಇವರ ನಿಷ್ಠಾವಂತ ಸೇವೆಯನ್ನು ಗುರುತಿಸಿ 20 ಅಧಿಕ ಕಡೆಗಳಲ್ಲಿ ಗುರುತಿಸಿ ಸನ್ಮಾನ ಮಾಡಿದ್ದಾರೆ.
ಕಳೆದ ಐದಾರು ವರ್ಷಗಳಿಂದ ನಂತೂರು ಸರ್ಕಲ್ ನಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡುವುದು ಕಾಯಕವಾಗಿತ್ತು. ಆದರೆ ಕಳೆದ ಎರಡು ತಿಂಗಳಿನಿಂದ ಇವರ ಸೀಟಿ ಶಬ್ದ ಮಾಡಲೇ ಇಲ್ಲ. ಕಾರಣ ಅನಾರೋಗ್ಯದಿಂದ ಬಳಲುತ್ತಿರುವುದು. ಹೌದು ಇವರಿಗೆ ಸದ್ಯದ ಪರಿಸ್ಥಿತಿಯಲ್ಲಿ ಎದ್ದು ನಡೆಯಲು ಅಗುತ್ತಿಲ್ಲ. ಸೊಂಟದಿಂದ ಕೆಳಭಾಗಕ್ಕೆ ಬಲವಿಲ್ಲ. ವೈದ್ಯರು ಇವರಿಗೆ ಡಿಸ್ಕ್ ಸಮಸ್ಯೆ ಉಂಟಾಗಿದೆ ಎಂದು ಹೇಳಿದ್ದಾರೆ. ಇವರ ದುಡಿಯದೆ ಇದ್ದರೆ ಇವರಿಗೆ ದಿನಗೂಲಿ ಸಿಗುವುದಿಲ್ಲ. ಕೂಲಿ ಸಿಗದಿದ್ದರೆ ಊಟಕ್ಕೂ ಕಷ್ಟ. ಅವಿವಾಹಿತರಾಗಿರುವ ಚಂಪಾ ಅವರಿಗೆ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡಿದ್ದಾರೆ.
ಇವರು ಇಬ್ಬರು ಮಕ್ಕಳು.

ಇನ್ನೊಬ್ಬರು ಇವರ ತಂಗಿ ‌ಪ್ರಸ್ತುತ  ಇವರು ವಾಸ ಮಾಡುತ್ತಿರುವುದು ತಾಯಿ ಮನೆಯಲ್ಲಿ ತಂಗಿಯ ಜೊತೆ. ತಂಗಿಗೆ ಉದಯ ಎಂಬವರ ಜೊತೆ ಮದುವೆಯಾಗಿದೆ. ಇಬ್ಬರು ಸಣ್ಣ ಪ್ರಾಯದ ಹೆಣ್ಮಕ್ಕಳಿದ್ದಾರೆ.
ಇವರದು ಇನ್ನೊಂದು ಕಥೆ.
ಅಕ್ಕನ ಜೊತೆ ತಾಯಿ ಮನೆಯಲ್ಲಿರುವ ಇವರ ಗಂಡ ಉದಯ ಅವರು ಸೆಲೂನ್ ಒಂದರಲ್ಲಿ ಕೆಲಸ ಮಾಡಿ ಜೀವನ ಮಾಡುತ್ತಿದ್ದರು.

ಇತ್ತೀಚಿಗೆ ಅವರಿಗೂ ಹುಷಾರಿಲ್ಲದೆ ಹಾಸಿಗೆ ಹಿಡಿಯುವಂತಾಗಿದೆ. ಹೃದಯ ಕಾಯಿಲೆ ಜೊತೆಯಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಂಗಿ ಮನೆ ಕೆಲಸದಾಕೆ. ಹಾಗಾಗಿ ದುಡಿಯುವ ಚಂಪಾ ಕೂಡಾ ಮನೆಯಿಂದ ಹೊರಗೆ ಬರಲು ಸಾಧ್ಯವಿಲ್ಲದೆ ಮೂಲೆಯಲ್ಲಿದ್ದಾರೆ. ಇವೆರಡು ಘಟನೆಗಳು ಇವರ ಕುಟುಂಬಕ್ಕೆ ಸಿಡಿಲೆರದಂತೆ ಅಗಿದೆ.

ಲಾಕ್ ಡೌನ್ ಬೇರೆ ಅಗಿದೆ. ಇವರಿಗೆ ಊಟ ಮಾಡಿದರೆ ಔಷಧಿ ಗೆ ಕಾಸಿಲ್ಲ, ಔಷಧ ಪಡೆದರೆ ಊಟ ಮಾಡಲು ಸಾದ್ಯವಿಲ್ಲ ಎಂಬಂತ ಸ್ಥಿತಿ. ಇವರ ಈ ಡೋಲಾಯನ ಬದುಕು ಕೇಳುವವರು ಯಾರು ಇಲ್ಲದಂತೆ ಆಗಿದೆ. ಈ ಭಾಗದ ಶಾಸಕರು ಒಮ್ಮೆ ಬೇಟಿ ನೀಡಿ ಸಮಸ್ಯೆಯ ಬಗ್ಗೆ ತಿಳಿಯಬೇಕಾಗಿದೆ. ಜೊತೆಗೆ ಇವರು ಕೆಲಸ ಮಾಡುವ ಇಲಾಖೆಯ ಸಹಾಯಹಸ್ತ ಬೇಕಾಗಿದೆ. ಸಹೃದಯ ಬಂಧುಗಳು ಇವರ ನೆರವಿಗೆ ಬರಬೇಕಾಗಿದೆ.

ಇವರ ಮೊಬೈಲು ಸಂಖ್ಯೆ ಮತ್ತು ಬ್ಯಾಂಕ್ ಡಿಟೈಲ್ ಇಲ್ಲಿದೆ. ಸಹಕಾರ ನೀಡುವವರು ಸಂಪರ್ಕ ಮಾಡಬಹುದು.

ಮೊ. ಸಂಖ್ಯೆ: 8123869879

SBI Branch :State Bank SB Ac No. 20210215667

2 COMMENTS

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here