

ಬಂಟ್ವಾಳ : ನ್ಯಾಯಬೆಲೆ ಅಂಗಡಿಗಳ ಮೂಲಕ 2 ತಿಂಗಳ ಅಕ್ಕಿ ವಿತರಣಾ ಕಾರ್ಯ ನಡೆಯುತ್ತಿದ್ದು, ಮಂಗಳವಾರ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಂಟ್ವಾಳ ಪೇಟೆಯ ನ್ಯಾಯಬೆಲೆ ಅಂಗಡಿಗೆ ತೆರಳಿ ಅಕ್ಕಿ ವಿತರಣಾ ಕಾರ್ಯವನ್ನು ಪರಿಶೀಲಿಸಿದರು.
ಬಳಿಕ ಅವರು ಬಿ.ಸಿ.ರೋಡಿನಲ್ಲಿರುವ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರ ಜತೆಗೆ ಪಡಿತರ ಅಕ್ಕಿ ವಿತರಣೆಯ ಕಾರ್ಯದ ಜತೆ ಚರ್ಚಿಸಿದರು. ಕೊರೊನಾ ವೈರಸ್ ತಡೆಯ ಕುರಿತಂತೆ ತಾಲೂಕಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು ಅವರಿಂದ ಮಾಹಿತಿ ಪಡೆದರು.
ಪಡಿತರ ಅಕ್ಕಿ ವಿತರಣೆ ಹಾಗೂ ನಗರ ಆರೋಗ್ಯ ಆರೋಗ್ಯ ಕಾಳಜಿಯ ಕುರಿತು ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದರು. ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಸುದರ್ಶನ್ ಬಜ ಶಾಸಕರ ಜತೆಗಿದ್ದರು.








