ಬಂಟ್ವಾಳ: ಅಕ್ರಮ ಕಳ್ಳಬಟ್ಟಿ ತಯಾರಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.

ಅಗ್ರಾರ್ ಕೊಡಿ ನಿವಾಸಿಗಳಾದ ಅಲ್ಸ್ಟರ್ ಪಿಂಟೋ ಮತ್ತು ರೋಶನ್ ರ್ಯಾನಿ ಪೆರ್ನಾಂಡಿಸ್ ಬಂಧಿತ ಆರೋಪಿಗಳು.

ಕರ್ನಾಟಕ ರಾಜ್ಯಾದ್ಯಂತ ನಿಷೇಧಿಸಿರುವ ಅಕ್ರಮ ಕಳ್ಳಬಟ್ಟಿ ಸಾರಾಯಿಯನ್ನು ಅಗ್ರಾರ್ ಕೋಡಿ ಯ ಮನೆಯೊಂದರಲ್ಲಿ ತಯಾರಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ‌ ನಡೆಸಿರುವ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ನೇತ್ರತ್ವದ ಅಪರಾಧ ಪತ್ತೆದಳ ತಂಡ ಹಾಗೂ ನಗರ ಠಾಣಾ ಎಸ್.ಐ. ಅವಿನಾಶ್ ಅವರು ಇಬ್ಬರನ್ನು ಬಂಧಿಸಿ ಸಾರಾಯಿ ತಯಾರಿಸಲು ಬಳಸಿರುವ ಸಾಮಾಗ್ರಿಗಳು, ಸ್ಕೂಟರ್ ಸಮೇತ 20 ಲೀಟರ್ ಕಳ್ಳಬಟ್ಟಿ ಸಾರಾಯಿ ಯನ್ನು ವಶಕ್ಕೆ ಪಡೆದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣವನ್ನು ಹಸ್ತಾಂತರ ಮಾಡಿದ್ದಾರೆ.

ಕಾರ್ಯಚರಣೆಯಲ್ಲಿ
ಬಂಟ್ವಾಳ ವೃತ್ತ ನಿರೀಕ್ಚಕರಾದ ಟಿ ಡಿ‌ ನಾಗರಾಜ್ ರವರ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆ ದಳದ ಪಿ ಎಸ್ ಐ ಕುಮಾರ್ ಕಾಂಬ್ಳೆ, ಬಂಟ್ವಾಳ ನಗರ ಠಾಣಾ ಪಿ ಎಸ್ ಐ ಅವಿನಾಶ್ ಗೌಡ, ಅಪರಾಧ ಪತ್ತೆದಳದ ಸಿಬ್ಬಂಧಿಗಳಾದ ಬಸವರಾಜ್, ವಿವೇಕ್, ಕುಮಾರ್ ರವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here