ಮಂಗಳೂರು: ಕೆಲವು ದಿನಗಳ ಹಿಂದೆ ತೊಕ್ಕೊಟ್ಟು ನಿವಾಸಿಯೋರ್ವರಿಗೆ ಕೊರೊನ ಪಾಸಿಟಿವ್ ಪತ್ತೆಯಾಗಿತ್ತು.
ಈ ಹಿನ್ನಲೆ ಬಿಕರ್ನಕಟ್ಟೆ -ಶಕ್ತಿನಗರ ರಸ್ತೆಯಲ್ಲಿರುವ ಸೌಜನ್ಯ ಲೇನ್ ನಿವಾಸಿಯು ತೊಕ್ಕೊಟ್ಟಿನ ಕೊರೋನ ಪೀಡಿತ ವ್ಯಕ್ತಿಯ ಸಂಪರ್ಕವನ್ನು ಹೊಂದಿದ್ದ ಎನ್ನಲಾಗುತ್ತಿದೆ.
ಈ ಮಾಹಿತಿಯನ್ನು ಪಡದಿದ್ದ ಸ್ಥಳೀಯರು ಮಂಗಳೂರು ಕಂಕನಾಡಿ ಟೌನ್ ಪೊಲೀಸು ಠಾಣೆಗೆ ಮಾಹಿತಿ ನೀಡಿದಾಗ ಕೂಡಲೇ ಸ್ಪಂದಿಸಿದ ಠಾಣೆಯ ಹೆಡ್ ಕಾನ್ ಸ್ಟೇಬಲ್ ಸಂತೋಷ್ ಸಿ. ಜೆ., ತಮ್ಮ ಸಿಬ್ಬಂದಿಯ ಜೊತೆಗೆ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು.

ಆ ವ್ಯಕ್ತಿಯು ಜ್ವರದಿಂದ ಬಳಲುತ್ತಿದ್ದು, ಕೂಡಲೇ ಕಂಕನಾಡಿ ಪೊಲೀಸರು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡುವ ವ್ಯವಸ್ಥೆ ಮಾಡಿದರು. ನೆರೆಹೊರೆಯ ವ್ಯಕ್ತಿಗಳಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here