


ಬಂಟ್ವಾಳ: ತಾಲೂಕಿನ ತುಂಬೆ ಗ್ರಾಮದ ನಿವಾಸಿಯೊಬ್ಬರಿಗೆ ಕೋವಿಡ್ – 19 (ಕೊರೋನ) ಸೋಂಕು ಇರುವುದು ದೃಢಪಟ್ಟಿದೆ ಎಂಬ ಸುದ್ದಿ ಗಳು ಹರಡುತ್ತಿದ್ದು ಪೋಲೀಸರು ತುಂಬೆ ವ್ಯಾಪ್ತಿಯ ಯಲ್ಲಿ ಹೆಚ್ಚಿನ ಭದ್ರತೆ ಮಾಡುತ್ತಿದ್ದಾರೆ.
ರಸ್ತೆಯಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದ್ದಾರೆ.
ಯಾವುದಕ್ಕೂ ಸ್ಪಷ್ಟವಾದ ಮಾಹಿತಿ ಜಿಲ್ಲಾಡಳಿತ ನೀಡಿದ ಬಳಿಕ ವೇ ಗೊತ್ತಾಗಲಿದ್ದು ವರದಿಗಾಗಿ ಕಾಯಲಾಗಿದೆ.
ವೈಯಕ್ತಿಕ ಕೆಲಸದ ನಿಮಿತ್ತ ದೆಹಲಿಗೆ ತರಳಿದ್ದ ತುಂಬೆಯ ಈ ಯುವಕ ಮಾ.22 ರಂದು ದೆಹಲಿಯಿಂದ ನಿಝಾಮುದ್ದೀನ್ ರೈಲಿನಲ್ಲಿ ಮಂಗಳೂರಿಗೆ ಬಂದಿದ್ದರು ಎನ್ನಲಾಗಿದೆ.
ನಿಝಾಮುದ್ದೀನ್ ತಬ್ಲಿಗ್ ಜಮಾಅತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವು ಮಂದಿಗೆ ಕೊರೋನ ಸೋಂಕು ತಗುಲಿದ ಮಾಹಿತಿಯ ಬಳಿಕ ನಿಝಾಮುದ್ದೀನ್ ರೈಲು ಮೂಲಕ ಮಂಗಳೂರಿಗೆ ಬಂದ ಈ ಯುವಕನನ್ನು ಪ್ರತ್ಯೇಕಿಸಿ ಆತನ ಗಂಟಲ ಸ್ರಾವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಅದರ ವರದಿ ಬಂದ ಬಳಿಕ ಪೋಲೀಸರು ಈ ಭದ್ರತೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಶಿಷ್ಟಾಚಾರದ ಪ್ರಕಾರದ ತುಂಬೆ ಗ್ರಾಮವನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದ್ದು ಪೊಲೀಸರು ಧ್ವನಿವರ್ಧಕದ ಮೂಲಕ ಯಾರೂ ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ನೀಡಿದ್ದಾರೆ.





